ಜೋಗಿ ಕೊಳ್ಳ

Author : ಕಲ್ಯಾಣರಾವ ಜಿ. ಪಾಟೀಲ

Pages 268

₹ 200.00




Year of Publication: 2017
Published by: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು
Address: # ಜಿಲ್ಲಾ ಘಟಕ, ಕಲಬುರಗಿ

Synopsys

ಜೋಗಿಕೊಳ್ಳ- ಕಲಬುರ್ಗಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಇದು. ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಸುರೇಂದ್ರಕುಮಾರ ಕೆರಮಗಿ ಸಂಪಾದಕರು ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿ, ಎಸ್.ಕೆ. ಬಿರಾದಾರ ಸಹ ಸಂಪಾದಕರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಕನ್ನಡಿಗರ, ಬಸವತತ್ತ್ವ ಅನುಯಾಯಿಗಳ ಗಮನ ಸೆಳೆದಿವೆ. ಬಸವೋತ್ತರ ಯುಗದ ಕೊನೆಯ ವಚನಕಾರ, ಮಹಾನ್ ಸಾಧಕ ಷಣ್ಮುಖ ಶಿವಯೋಗಿಗಳು ತಪಸ್ಸುಗೈದ ಸ್ಥಳವೇ ಜೋಗಿಕೊಳ್ಳ. ಈ ಹೆಸರಿನ ಶೀರ್ಷಿಕೆಯಲ್ಲಿ 2017ರ ಕಲಬುರ್ಗಿ ಜಿಲ್ಲಾ ಎರಡನೆಯ ಶರಣ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಪುಟ ರೂಪುಗೊಂಡಿದೆ.

‘ಜೋಗಿಕೊಳ್ಳ’ದಲ್ಲಿ ವಿದ್ವತ್ಪೂರ್ಣ ಸಂಶೋಧನಾತ್ಮಕ ಒಳನೋಟಗಳುಳ್ಳ 32 ಲೇಖನಗಳಿವೆ. ಅವುಗಳನ್ನು ತತ್ವದರ್ಶನ, ಶರಣ ದರ್ಶನ, ಸಮನ್ವಯದರ್ಶನ ಎಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ತತ್ವದರ್ಶನದಲ್ಲಿ ವಿಶ್ವಮಾನ್ಯ ಮೌಲಿಕ ಪರಿಕಲ್ಪನೆಗಳಾದ ಕಾಯಕ-ದಾಸೋಹ, ಶರಣರ ವಿಚಾರಧಾರೆಗಳ ಜೊತೆಗೆ ತತ್ವಪದ ಸಾಹಿತ್ಯ ಚಳುವಳಿಯ ಆಯಾಮಗಳ ಚರ್ಚೆಗಳಿವೆ. ಶಾಸನ-ಶಿಲ್ಪಗಳಲ್ಲಿ ಅಂತರ್ಗತಗೊಂಡಿದ್ದ ವಿಷಯಾಂಶಗಳು, ಶರಣರ ಶೋಧಗಳು ಅಡಕಗೊಂಡಿವೆ. ಈ ಭಾಗದ 14 ಲೇಖನಗಳು ಬಸವಾದಿ ಶಿವಶರಣರ ಚಿಂತನೆಗಳನ್ನು, ವಚನ ಸಾಹಿತ್ಯದ ವೈವಿಧ್ಯತೆಯನ್ನು, ಕಲ್ಯಾಣ ಕ್ರಾಂತಿಯ ಫಲಶ್ರುತಿಗಳನ್ನು ಪರಾಮರ್ಶಿಸುತ್ತವೆ. ಶರಣ ದರ್ಶನ ಭಾಗದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಆಯ್ದಕ್ಕಿ ಮಾರಯ್ಯ, ಕಾಳವ್ವೆ, ಬಿಬ್ಬಿ ಬಾಚಯ್ಯ, ಷಣ್ಮುಖ ಶಿವಯೋಗಿ, ಘನಮಠಶಿವಯೋಗಿ ಮತ್ತು ಸರ್ವಜ್ಞರಂತಹ ಮಹಾನುಭಾವಿ ಮತ್ತು ಶಿವಾನುಭಾವಿಗಳ ಇತಿವೃತ್ತಗಳೊಂದಿಗೆ ಅವರು ದರ್ಶಿಸಿದ ಅರಿವು, ಆಚಾರಗಳ ನಿಲುವುಗಳ ಬಗೆಗೆ ಬಹು ಸೂಕ್ಷ್ಮ ವಿಚಾರಗಳು ಪ್ರಸ್ತಾಪಗೊಂಡಿವೆ. ಇಲ್ಲಿನ 14 ಲೇಖನಗಳು ಪರಂಪರೆ ಮತ್ತು ಸಮಕಾಲೀನತೆಯನ್ನು ಅನುಸಂಧಾನಗೊಳಿಸುವಲ್ಲಿ ಸಮರ್ಥವಾಗಿವೆ. ಸಾಮಾಜಿಕ ಪ್ರಜ್ಞೆಯನ್ನು ಜಾಗೃತ ಗೊಳಿಸುತ್ತವೆ. .

ಸಮನ್ವಯ ದರ್ಶನ ವಿಭಾಗದಲ್ಲಿ ನಾಲ್ಕು ಲೇಖನಗಳಿವೆ. ಕಲಬುರ್ಗಿ ಜಿಲ್ಲೆಯ ಶರಣ ಪರಂಪರೆಯನ್ನು, ನೆರೆ ಭಾಷೆಗಳ ದಬ್ಬಾಳಿಕೆ, ಅಧಿಕಾರಸ್ಥರ ಆಟಾಟೋಪಗಳ ಸಂದರ್ಭದಲ್ಲಿ ಕನ್ನಡವನ್ನು ಕಾಯ್ದಿಟ್ಟು ಬೆಳೆಸಿದ ಭಾಲ್ಕಿ ಹಿರೇಮಠದ ಕೊಡುಗೆಯನ್ನು; ಬಸವಣ್ಣನವರ ಜಾತ್ಯತೀತ ನಿಲುವುಗಳನ್ನು ಹಾಗೂ ಸಮ್ಮೇಳನಾಧ್ಯಕ್ಷ ಡಾ. ಶಿವಾನಂದ ಮಹಾಸ್ವಾಮಿಗಳ ಬದುಕು, ಸೇವಾ ಕಾರ್ಯಗಳನ್ನು ದಾಖಲಿಸಲಾಗಿದೆ. ‘ಜೋಗಿಕೊಳ್ಳ’ವು ಸಾಧಕ ಜೀವನಕ್ಕೆ ಪೂರಕವಾಗಬಲ್ಲ, ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಅಡಿಪಾಯ ಆಗಬಲ್ಲ ಮಾಹಿತಿ ನೀಡುತ್ತದೆ. ಸಾಂಸ್ಕೃತಿಕ ಆಯಾಮಗಳನ್ನು ವಸ್ತುನಿಷ್ಠವಾಗಿ ತೆರೆದಿಡಬಲ್ಲ ಸಾರ್ಥಕ ಸಂಪುಟವಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books