ದಾಸೋಹ (ಸ್ಮರಣ ಸಂಚಿಕೆ)

Author : ಕಲ್ಯಾಣರಾವ ಜಿ. ಪಾಟೀಲ

Pages 215

₹ 65.00




Year of Publication: 1999
Published by: ಕನ್ನಡ ಸಾಹಿತ್ಯ ಪರಿಷತ್ತು,
Address: # ಸ್ವಾಗತ ಸಮಿತಿ ಕಲಬುರ್ಗಿ ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಕಲಬುರಗಿ

Synopsys

ಕಲಬುರಗಿ ಜಿಲ್ಲಾ ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ-ದಾಸೋಹ. ಡಾ.  ಕಲ್ಯಾಣರಾವ ಜಿ. ಪಾಟೀಲ ಹಾಗೂ ಬಸವ ಪಾಟೀಲ ಜಾವಳಿ   ಸಂಪಾದಕರು. ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಇತಿಹಾಸ, ಸಮಾಜ, ಧರ್ಮ ಸಮನ್ವಯ, ಕೋಮು ಸಾಮರಸ್ಯ, ವಚನ ಸಾಹಿತ್ಯ, ಆಧುನಿಕ ವಚನ ಸಾಹಿತ್ಯ, ಆಧುನಿಕ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಇಪ್ಪತ್ತು ವಿದ್ವಾಂಸರು ಮತ್ತು ಯುವ ಬರಹಗಾರರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿರುವುದು ಗಮನಾರ್ಹ. ಸಮ್ಮೇಳನಾಧ್ಯಕ್ಷ ಶ್ರೀಮತಿ ಗೀತಾ ನಾಗಭೂಷಣ ಅವರ ಬದುಕು ಬರಹ ಕುರಿತು ಪರಿಚಯದ ಲೇಖನವಿದೆ. ಕೊನೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ವಿವಿಧ ಸಮಿತಿಗಳ ಯಾದಿ ಮತ್ತು ಲೇಖಕರ ವಿಳಾಸಗಳನ್ನು ಕೊಡಲಾಗಿದೆ. ಸೀಮಿತ ಅವಧಿಯಲ್ಲಿಯೇ ಕಲಬುರಗಿ ಜಿಲ್ಲೆಯ ಬಗೆಗಿನ ಮಹತ್ವಪೂರ್ಣ ಮಾಹಿತಿಗಳನ್ನು ಕಲೆಹಾಕಿರುವುದು ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಚಾರಿತ್ರಿಕವಾಗಿ ದಾಖಲಿಸಿರುವುದು ಈ ಕೃತಿಯ ವಿಶೇಷತೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books