‘ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ’ ಐಚ್ಛಿಕ ಕನ್ನಡ ಪತ್ರಿಕೆ-2

Author : ಶಿವಾನಂದ ಕಲಬುರಗಿ

Pages 376

₹ 350.00




Year of Publication: 2021
Published by: ಸಾಹಿತ್ಯ ಸಂಭ್ರಮ ಪ್ರಕಾಶನ
Address: ಜ್ಞಾನಭಾರತಿ, ಬೆಂಗಳೂರು-560056
Phone: 9880294079

Synopsys

‘ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ’ ಐಚ್ಛಿಕ ಕನ್ನಡ ಪತ್ರಿಕೆ-2 ಕೃತಿಯು ಕನ್ನಡ ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಪಠ್ಯಪುಸ್ತಕವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಹೊನ್ನುಸಿದ್ದಾರ್ಥ ಅವರು, ಸಾಧನೆಗೆ ಸಾವಿರಾರು ಮಾರ್ಗ, ಸಾಧಕನಿಗೆ ಒಂದೇ ಮಾರ್ಗ, ನಿರ್ದಿಷ್ಟವಾದ ಮಾರ್ಗ ಹಿಡಿದರೆ ಹಲವು ಸಾಧನೆಗಳಿಗೆ ನಾಂದಿಯಾದೀತು. ಸಮಕಾಲೀನ ಬದುಕಿನ ದಿಕ್ಕನ್ನೇ ಬದಲಿಸುವುದರ ಜೊತೆಗೆ ಬದುಕಿನ ಬದಲಾವಣೆಗೆ ಈ ಕೃತಿ ಕಾರಣವಾಗಬಲ್ಲದು. ಈ ಹಿನ್ನೆಲೆಯಲ್ಲಿ, ಕುಮಾರ ಇಂದ್ರಬೆಟ್ಟ ಹಾಗೂ ಶಿವಾನಂದ ಕಲಬುರ್ಗಿ ಮೊದಲಾದ ಗೆಳೆಯರು ಯುಜಿಸಿ ಎನ್ ಇಟಿ, ಕೆಸೆಟ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪಿಯು ಉಪನ್ಯಾಸಕರ ನೇಮಕಾತಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಉಪಯುಕ್ತವಾದ ಕನ್ನಡ ಸಾಹಿತ್ಯ ಸಂಭ್ರಮ ಪ್ರಶ್ನೋತ್ತರ ಕೋಶವೊಂದನ್ನು ಸಿದ್ದಪಡಿಸಿ ಪ್ರಕಟಿಸಿದ್ದಾರೆ. ಇದು ಕೇವಲ ಒಂದೇ ವಾರದಲ್ಲಿ ಒಂದು ಸಾವಿರ ಪ್ರತಿಗಳು ಖರ್ಚಾಗಿ ದಾಖಲೆಯನ್ನು ನಿರ್ಮಿಸಿರುವುದು ಪ್ರಸ್ತುತ ಕೃತಿಯು ಸ್ಪರ್ಧಾರ್ಥಿಗಳಿಗೆ ಎಷ್ಟು ಉಪಯುಕ್ತ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

About the Author

ಶಿವಾನಂದ ಕಲಬುರಗಿ
(01 May 1982)

ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ.  ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ),  ಅಂತರಂಗ (ಕವನ ಸಂಕಲನ),  ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021,  ...

READ MORE

Related Books