ಕೃತಿ ಪರಿಚಯ

Author : ಎಚ್.ಎಸ್. ಗೋಪಾಲರಾವ್

Pages 80

₹ 60.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560009
Phone: 080 2216 1900

Synopsys

ಕೋ. ಚೆನ್ನಬಸಪ್ಪ ಅವರು ರಚಿಸಿದ ‘ಬೇಡಿ ಕಳಚಿತ ದೇಶ ಒಡೆಯಿತು’ ಕೃತಿಯ ಕುರಿತು ಕೋ.ಚೆ. ಅವರೊಂದಿಗೆ ಲೇಖಕರಾದ ಲಕ್ಷ್ಮಣ ಕೊಡಸೆ, ಹರಿಹರಪ್ರಿಯ, ಕುಲಶೇಖರಿ ಹಾಗೂ ಶ್ರೀನಿವಾಸಮೂರ್ತಿ ಅವರು ಸಂದರ್ಶನ ಮಾಡಿದ ಹಾಗೂ ಲೇಖಕ ಎಚ್.ಎಸ್. ಗೋಪಾಲರಾವ್ ಅವರು ಸಮನ್ವಯಕಾರರಾಗಿ ನಿರ್ವಹಿಸಿದ ಕೃತಿ-ಕೃತಿ ಪರಿಚಯ, ಸಂದರ್ಶನದಿಂದ. ದೇಶ ಸ್ವಾತಂತ್ಯ್ರ ಪಡೆಯಿತು ನಿಜ. ಆದರೆ, ದೇಶ ಒಡೆದು ಹೋಯಿತು ಎಂಬ ಐತಿಹಾಸಿಕ ಘಟನೆಗಳ ಮೇಲೆ ಕ್ಷಕಿರಣ ಬೀರುವ ಬರಹಗಳನ್ನು ಒಳಗೊಂಡಿದ್ದರ ಕೃತಿಯ ಬಗ್ಗೆ ಹಾಗೂ ಈ ಕೃತಿ ಲೇಖಕರ ವಿಚಾರಗಳನ್ನು ಕಟ್ಟಿಕೊಡಲಾಗಿದೆ. ದೇಶದ ವಿಭಜನೆಗೆ ಕಾರಣ, ಅದರ ಪರಿಣಾಮಗಳ ವಿಶ್ಲೇಷಣಾತ್ಮಕ ಮಾಹಿತಿಯನ್ನು ಸಂದರ್ಶನದ ಮೂಲಕ ಪಡೆಯಲಾಗಿದೆ. ಬೇಡಿ ಕಳಚಿತು ದೇಶ ಒಡೆಯಿತು ಕೃತಿ ಹಾಗೂ ಅದಕ್ಕಿಂತಲೂ ತೀಕ್ಷ್ಣವಾಗಿ ಲೇಖಕರು ಕೃತಿಯಲ್ಲಿ ಪ್ರತಿಕ್ರಿಯಿಸಿದ್ದು ಈ ಕೃತಿಯ ವಿಶೇಷ.

About the Author

ಎಚ್.ಎಸ್. ಗೋಪಾಲರಾವ್
(18 November 1946)

ಡಾ. ಎಚ್.ಎಸ್. ಗೋಪಾಲರಾವ್  ಅವರು 1946ರ ನವೆಂಬರ್‌ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ ನಂತರ ಅವರು ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದರು.  ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ.  ಪದವಿ ಪಡೆದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ.  ಜೇನು ನಂಜು, ...

READ MORE

Related Books