ಕನ್ನಡದ ಕೈಗನ್ನಡಿ

Author : ಶಿವಾನಂದ ಕಲಬುರಗಿ

Pages 131

₹ 123.00




Year of Publication: 2021
Published by: ಸಾಹಿತ್ಯ ಸಂಭ್ರಮ ಪ್ರಕಾಶನ
Address: # 43, 10ನೇ ಅಡ್ಡರಸ್ತೆ, ಜ್ಞಾನಗಂಗಾನಗರ, ಜ್ಞಾನಭಾರತಿ ಅಂಚೆ, ಬೆಂಗಳೂರು-560056.
Phone: 7676985533

Synopsys

ಕನ್ನಡದ ಕೈಗನ್ನಡಿ ಎಂಬುದು ಲೇಖಕ ಶಿವಾನಂದ ಕಲಬುರಗಿ ಅವರು ಬರೆದ ಕೃತಿ. ಐಎಎಸ್, ಕೆಎಎಸ್, ಪಿಎಸ್ ಐ, ಪಿಡಿಓ, ಎಫ್ ಡಿಎ, ಎಸ್ ಡಿಎ, ಹೀಗೆ ವಿವಿಧ ವಲಯಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕೃತಿ ರಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ರಾಕೇಸ್ ಜ. ಕಾಂಬಳೆ ಅವರು ಕೃತಿಗೆ ಬೆನ್ನುಡಿ ಬರೆದು ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ ಇಂತಹ ಕೃತಿಗಳು ಸೂಕ್ತ ಮಾರ್ಗದರ್ಶನ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶಿವಾನಂದ ಕಲಬುರಗಿ
(01 May 1982)

ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ.  ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ),  ಅಂತರಂಗ (ಕವನ ಸಂಕಲನ),  ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021,  ...

READ MORE

Related Books