ಶಬ್ದಮಣಿ ದರ್ಪಣ ದೀಪಿಕೆ

Author : ಕಲ್ಯಾಣರಾವ ಜಿ. ಪಾಟೀಲ

Pages 152

₹ 110.00




Year of Publication: 2015
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: # ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ.

Synopsys

ಕಲ್ಯಾಣರಾವ್ ಜಿ. ಪಾಟೀಲ ಅವರ ‘ಶಬ್ದಮಣಿ ದರ್ಪಣ ದೀಪಿಕೆ-ಕೃತಿಯು ಕಲಬುರಗಿಯ ಬಸವ ಪ್ರಕಾಶನ (2009) ನಂತರ ಪರಿಷ್ಕೃತ ಆವೃತ್ತಿಯು 2012 ರಲ್ಲಿ ಪ್ರಕಟಗೊಂಡಿತ್ತು. ಸದ್ಯದ ಕೃತಿಯು 3ನೇ ಆವೃತ್ತಿ. ಬಿ.ಎ., ಎಂ.ಎ., ಬಿ.ಇಡಿ. ಕೆ.ಎ.ಎಸ್; ಐ.ಎ.ಎಸ್ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಶಬ್ದಮಣಿ ದರ್ಪಣ ಅಥವಾ ಹಳಗನ್ನಡ ವ್ಯಾಕರಣವೆಂದರೆ ಅಂಜುವ ಪರೀಕ್ಷಾರ್ಥಿಗಳೇ ಹೆಚ್ಚು. ಹೀಗಾಗಿ, ಹಳಗನ್ನಡ ವ್ಯಾಕರಣವನ್ನು ಸರಳೀಕರಿಸಿದೆ. ಕಳೆದ 25 ವರ್ಷಗಳ ಸ್ನಾತಕ, ಸ್ನಾತಕೋತ್ತರ ಕನ್ನಡ ಪ್ರಶ್ನೆಪತ್ರಿಕೆಗಳನ್ನು ಎದುರಿಗಿಟ್ಟುಕೊಂಡು ಅವುಗಳೆಲ್ಲವನ್ನೂ ಏಕಕಾಲಕ್ಕೆ ಉತ್ತರಿಸಬಲ್ಲ ಕೃತಿಯನ್ನು ರೂಪುಗೊಳಿಸಲಾಗಿದೆ. ‘ಶಬ್ದಮಣಿದರ್ಪಣ’ ವೆಂಬ ದಟ್ಟಾರಣ್ಯದಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಇದು ದೀಪಿಕೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಶಬ್ದಮಣಿದರ್ಪಣದ ಪೀಠಿಕಾ, ಸಂಜ್ಞಾ, ಸಂಧಿ, ನಾಮ, ಸಮಾಸ ಮತ್ತು ಆಖ್ಯಾತ ಪ್ರಕರಣಗಳಲ್ಲಿರುವ ಮಹತ್ವ ಸೂತ್ರಗಳಿವೆ. ನಂತರದಲ್ಲಿ ಕವಿ-ಕೃತಿ ಪರಿಚಯ, ಶಬ್ದಮಣಿದರ್ಪಣದಲ್ಲಿರುವ ಮಹತ್ವದ ಹದಿನೈದು ವಿಷಯ, 3ನೇ ಭಾಗದಲ್ಲಿ 21 ಟಿಪ್ಪಣಿಗಳನ್ನು ವಿಶ್ಲೇಷಿಸಿದೆ. ಅನುಬಂಧಗಳು ನೀಡಿದ್ದು, ಪಾರಿಭಾಷಿಕ ಶಬ್ದಗಳಿಗೆ ಸರಳ ಅರ್ಥ ನೀಡಲಾಗಿದೆ. ಗ್ರಂಥಋಣದಲ್ಲಿ ಈವರೆಗೆ ಶಬ್ದಮಣಿದರ್ಪಣ ಕುರಿತು ಪ್ರಕಟಿತ ಮಹತ್ವದ ಕೃತಿಗಳ ಯಾದಿ ನೀಡಿದೆ ಎಂದು ಲೇಖಕರು ತಿಳಿಸಿದ್ದಾರೆ. 

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books