ನಡುಗನ್ನಡ ಕಾವ್ಯ ಸಂಗ್ರಹ

Author : ಕಲ್ಯಾಣರಾವ ಜಿ. ಪಾಟೀಲ

Pages 100

₹ 45.00




Year of Publication: 2019
Published by: ಸಿದ್ಧಲಿಂಗೇಶ್ವರ ಪ್ರಕಾಶನ
Address: ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ-585101

Synopsys

ನಡುಗನ್ನಡ ಕಾವ್ಯ ಸಂಗ್ರಹ- ಡಾ. ಕಲ್ಯಾಣರಾವ್ ಪಾಟೀಲರು ಸಂಪಾದಿಸಿದ ಕೃತಿ. 2017ರಲ್ಲಿ ಮೊದಲ ಮುದ್ರಣ ಕಂಡಿದೆ. ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಸ್ನಾತಕ ತರಗತಿಗಳಿಗೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ 3ನೇ ಸೆಮಿಸ್ಟರ್ ತರಗತಿಯ ಬೇಸಿಕ್ ಕನ್ನಡ ಪಠ್ಯವನ್ನಾಗಿಸಲಾಗಿದೆ. ನಡುಗನ್ನಡ ಕಾಲಘಟ್ಟದ ವಚನ, ರಗಳೆ, ಶತಕ, ಷಟ್ಪದಿ, ಸಾಂಗತ್ಯ, ತ್ರಿಪದಿ, ಕೀರ್ತನೆ, ಪತ್ವಪದ ರೂಪಗಳಿಗೆ ಸಂಬಂಧಿಸಿದ ಮಹತ್ವದ ಪಠ್ಯಗಳನ್ನುಸಂಗ್ರಹಿಸಿದೆ.

‘ನಡೆ-ಶುಚಿ’ ಎಂಬ ಶೀರ್ಷಿಕೆಯಲ್ಲಿ ಶಿವಶರಣ ಶರಣೆಯರಾದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ಆಯ್ದ ವಚನಗಳಿವೆ. ಈ ವಚನಗಳು ಸಮಗ್ರ ಗುಣಮಟ್ಟದ ವ್ಯಕ್ತಿತ್ವ ವಿಕಸನಕ್ಕೆ ತೋರುದೀಪದಂತಿವೆ. ‘ಭಕ್ತಿ ವ್ಯವಸಾಯ’ ಶೀರ್ಷಿಕೆಯಲ್ಲಿ ಮಹಾಕವಿ ಹರಿಹರನ ಇಳೆಯಾಂಡ ಗುಡಿಮಾರರ ರಗಳೆ ಇವೆ. 63 ಪುರಾತನರಲ್ಲಿ ಒಬ್ಬನಾಗಿರುವ ಇಳೆಯಾಂಡ ಗುಡಿಮಾರನು ಸಮರ್ಪಣಾ ಭಕ್ತಿ, ದಾಸೋಹಂಭಾವ ಮತ್ತು ನಿರಂತರ ಕಾಯಕನಿಷ್ಠೆಗೆ ಹೆಸರಾದವನು. ದಿನನಿತ್ಯದ ದುಡಿಮೆಯಲ್ಲಿಯೇ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂಬ ಸಂದೇಶ ಇಲ್ಲಿದೆ. ‘ಬಲ್ಲವರಿಂದ ಕಲ್ತು’ ಶೀರ್ಷಿಕೆಯಲ್ಲಿ ಸೋಮೇಶ್ವರ ಶತಕದ ಆಯ್ದ ನುಡಿಗಳಿವೆ. ವೈಯಕ್ತಿಕ ಭಕ್ತಿ, ಕೌಟುಂಬಿಕ ನೆಮ್ಮದಿ, ಸಾಮಾಜಿಕ ಸಾಮರಸ್ಯದ ರೀತಿ-ನೀತಿಯ ಮೌಲ್ಯಗಳನ್ನು ತಿಳಿಯಬಹುದು. ‘ಕೃಷ್ಣ ಕರುಣಿಸು’ ಶೀರ್ಷಿಕೆಯಲ್ಲಿ ಕರ್ಣಾಟ ಭಾರತ ಕಥಾಮಂಜರಿಯಲ್ಲಿನ ಕರ್ಣಪರ್ವದಲ್ಲಿ ಬರುವ ರಸೋಜ್ವಲ ಹೃದ್ಯ ಸಂದರ್ಭದ ಪದ್ಯಗಳನ್ನು ಕೊಡಲಾಗಿದೆ. . ‘ವಿರಸವ ಬಿಡು’ ಎನ್ನುವ ಶೀರ್ಷಿಕೆಯಲ್ಲಿ ಭರತೇಶ ವೈಭವ ಎಂಬ ರತ್ನಾಕರವರ್ಣಿಯ ಸಾಂಗತ್ಯ ಕೃತಿಯಲ್ಲಿನ ಪಠ್ಯಭಾಗವು ಪ್ರತಿಷ್ಠೆ-ಸರಳತೆ, ಅಹಂಕಾರ-ವಿನಮ್ರತೆ, ಸಂಘರ್ಷ-ಸೌಜನ್ಯತೆತೆ, ಭೋಗ-ತ್ಯಾಗ ವೈರಾಗ್ಯಗಳನ್ನು ಸಮನ್ವಯಗೊಳಿಸಿದೆ. ‘ಜಾತಿ ವಿಜಾತಿ ಎನಬೇಡ’ ಶೀರ್ಷಿಕೆಯಲ್ಲಿ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸಿದೆ. ‘ಮಾನವ ಜನ್ಮ ದೊಡ್ಡದು’ ಶೀರ್ಷಿಕೆಯಲ್ಲಿ ಹರಿದಾಸರ ಕೀರ್ತನೆಗಳನ್ನು ‘ತನ್ನ ತಾನು ತಿಳಿದ ಮೇಲೆ’ ಶೀರ್ಷಿಕೆಯಡಿ ಅನುಭಾವಿಗಳ ಆಯ್ದ ತತ್ವಪದಗಳನ್ನು ಸಂಗ್ರಹಿಸಿದೆ. ಪ್ರಸ್ತುತ ನಡುಗನ್ನಡ ಕಾವ್ಯ ಸಂಗ್ರಹದಲ್ಲಿ ಅನುಕ್ರಮವಾಗಿ ವಚನ, ರಗಳೆ, ಶತಕ, ಷಟ್ಪದಿ, ಸಾಂಗತ್ಯ, ತ್ರಿಪದಿ, ಕೀರ್ತನೆ ಮತ್ತು ತತ್ವಪದ ಎಂಬ ಕಾವ್ಯರೂಪಗಳಲ್ಲಿ ಬರುವ ಪಠ್ಯಭಾಗಗಳಲ್ಲಿ ವಿದ್ಯಾರ್ಥಿಗಳ ಏಳಿಗೆಗೆ, ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿದ ವಸ್ತುವಿಷಯಗಳಿಗೆ ಆದ್ಯತೆ ಕೊಟ್ಟಿರುವುದು ಮಹತ್ವದ ಸಂಗತಿಯಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books