ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ

Author : ಶಿ.ಶಿ. ಬಸವನಾಳ

Pages 710

₹ 5.00




Year of Publication: 1940
Published by: ಕರ್ನಾಟಕ ವಿದ್ಯಾವರ್ಧಕ ಸಂಘ
Address: ಧಾರವಾಡ

Synopsys

ಭಟ್ಟಾ ಕಳಂಕ ದೇವ ವಿರಚಿತ ಸಂಸ್ಕೃತ ಮೂಲದ ಕರ್ಣಾಟಕ ಶಬ್ದಾನುಶಾಸನದ ವಿಸ್ತಾರವಾದ ಕನ್ನಡ ಅನುವಾದದ ಕೃತಿಯನ್ನು ಕುಂಡಲಿ ಗಿರಿಯಾಚಾರ್ ರು ರಚಿಸಿದ್ದು, ಅದನ್ನು ಶಿ.ಶಿ. ಬಸವನಾಳರು ಸಂಪಾದಿಸಿದ್ದಾರೆ. ಆ ಕೃತಿಯೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಹಳಗನ್ನಡ ವ್ಯಾಕರಣ ಕುರಿತು ಬರೆದ ಮೊದಲ ಗ್ರಂಥವಾಗಿ ನಾಗವರ್ಮನ ಶಬ್ದಸ್ಮೃತಿ ಗ್ರಂಥ. ಎರಡನೇಯದ್ದು, ಕರ್ಣಾಟಕ ಭಾಷಾ ಭೂಷಣ ಎಂಬುದು. ಮೂರನೇ ಕೃತಿ ಎಂದರೆ ಕೇಶಿರಾಜ ಬರೆದ ಶಬ್ದಮಣಿ ದರ್ಪಣ ಹಾಗೂ ನಾಲ್ಕನೆಯದ್ದೇ-ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ. ಇದನ್ನು ಮೊದಲು ಭಟ್ಟಾ ಕಳಂಕದೇವ ಎಂಬಾತ ಸಂಸ್ಕೃತದಲ್ಲಿ ರಚಿಸಿದ್ದ. ಪ್ರಯೋಗ-ಪ್ರಾಮಣ್ಯದಲ್ಲಿ ಶಬ್ದಮಣಿ ದರ್ಪಣವನ್ನು ಸರಿಗಟ್ಟದಿದ್ದರೂ ಶಾಸ್ತ್ರೀಯ ವಿವೇಚನೆಯಲ್ಲಿ ಪ್ರೌಢವೂ, ವಿಶ್ವಾಸಾರ್ಹವೂ ಆಗಿದೆ ಎಂದು ಮುನ್ನುಡಿಯಲ್ಲಿ ಕೃತಿಯ ಸಂಪಾದಕ ಶಿ.ಶಿ. ಬಸವನಾಳರು ಅಭಿಪ್ರಾಯಪಟ್ಟಿದ್ದಾರೆ.

About the Author

ಶಿ.ಶಿ. ಬಸವನಾಳ
(07 November 1893 - 22 February 1951)

ಸಾರ್ವಜನಿಕ ಬದುಕು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಅವರು ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 1893ರ ನವೆಂಬರ್ 7ರಂದು ಜನಿಸಿದ ಅವರ ತಂದೆ ಶಿವಯೋಗಪ್ಪ ತಾಯಿ ಸಿದ್ಧಮ್ಮ. ಮೆಟ್ರಿಕ್ ಪರೀಕ್ಷೆ (1910) ಮುಗಿಸಿದ ನಂತರ ಪುಣೆಗೆ ತೆರಳಿದ್ದು, ಅಲ್ಲಿಯ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. (1915) ಪೂರ್ಣಗೊಳಿಸಿದರು.  ಸರ್ಕಾರಿ ಕೆಲಸಕ್ಕೆ ಸೇರದೆ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿ ಸ್ಥಾಪಿಸಿ, ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ...

READ MORE

Related Books