ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ- ಕನ್ನಡ ನಿಘಂಟು

Author : ಬಿದರಹಳ್ಳಿ ನರಸಿಂಹಮೂರ್ತಿ

Pages 548

₹ 600.00




Year of Publication: 2014
Published by: ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು
Address: ಶ್ರೀ ಚನ್ನಪ್ಪಸ್ವಾಮಿ ಹಿರೇಕಲ್ಮಠ, ಹೊನ್ನಾಳಿ, ಶಿವಮೊಗ್ಗಜಿಲ್ಲೆ

Synopsys

ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ- ಕನ್ನಡ ನಿಘಂಟನ್ನು ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಸಂಪಾದಿಸಿದ್ದಾರೆ. ಈ ಗ್ರಂಥವು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅನುಪಮ ಕೊಡುಗೆಯಾಗಿದೆ. ಕನ್ನಡ ಪದಕೋಶಗಳನ್ನು ಹತ್ತಿರದಿಂದ ಬಲ್ಲವರಿಗೆ ನ್ಯಾಮತಿ ಪಂಡಿತ ಪ್ರಭಣ್ಣನವರ ಹೆಸರು ಗೊತ್ತಿರುತ್ತದೆ. ಪ್ರಭಣ್ಣನವರು ನೋಡಿರುವ ಆಕರಗಳು ಅವರ ಓದಿನ ಹರವನ್ನು ತೋರಿಸುತ್ತದೆ. ಆ ಎಲ್ಲ ಆಕರಗಳನ್ನು ನೋಡಿ ನಮೂದುಗಳನ್ನು ಆಯ್ದು ಉಲ್ಲೇಖಗಳನ್ನು ಪಟ್ಟಿಮಾಡಿ ಬಳಿಕ ತಿರುಳನ್ನು ಗುರುತು ಮಾಡುವ ಕೆಲಸವನ್ನು ಮಾಡಿದ್ದಾರೆ. ಇದೆಲ್ಲವೂ ನುಡಿಯ ಒಳ ಹರಿವಿನ ಆಳವಾದ ಅರಿವಿರುವವರಿಗೆ ಮಾತ್ರ ಆಗುವ ಕೆಲಸ ಜೊತೆಗೆ ದಣಿವಿಲ್ಲದ ದುಡಿಮೆಯೂ ಬೇಕಾಗುತ್ತದೆ. ಇವೆಲ್ಲವನ್ನೂ ಪ್ರಭಣ್ಣನವರು ಹೊಂದಿದ್ದರು ಎಂಬುದಕ್ಕೆ ಈ ಕೃತಿಯ ಪುಟಪುಟವೂ ಪುರಾವೆ ನೀಡುತ್ತವೆ.

 

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books