ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ

Date: 25-10-2023

Location: ಬೆಂಗಳೂರು


“ಅರ್ಧಮತ್ಸ್ಯೇಂದ್ರಾಸನದಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಹಾಗೂ ಇದೊಂದು ಸಕ್ಕರೆ ಖಾಯಿಲೆಗೆ ಉತ್ತಮವಾದ ಆಸನವಾಗಿದೆ. ವೀರಾಸನ ಮಾಡುವುದರಿಂದ ತೊಡೆಗಳು ಬಲಿಷ್ಠವಾಗುತ್ತವೆ ಮತ್ತು ಜ್ಞಾಪನ ಶಕ್ತಿಯು ಹೆಚ್ಚಿಸುತ್ತದೆ. ಈ ಎರಡೂ ಆಸನಗಳ ಕುರಿತು ಯೋಗಪಟು ಚೈತ್ರಾ ಹಂಪಿನಕಟ್ಟಿ ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ವಿವರಿಸಿದ್ದಾರೆ.''

ಈ ಆಸನದ ಹೆಸರು ಸಂಸ್ಕೃತದಿಂದ ಬಂದಿದೆ.
ಅರ್ಧ : ಅರ್ಧ
ಮತ್ಸ್ಯ: ಮೀನು
ಇಂದ್ರ : ರಾಜ
ಆಸನ : ಭಂಗಿ

ಅರ್ಧಮತ್ಸ್ಯೇಂದ್ರಾಸನ ಮಾಡುವ ವಿಧಾನ:

ಮೊದಲು ದಂಡಾಸನದಲ್ಲಿ‌ ಕುಳಿತುಕೊಳ್ಳಬೇಕು, ನಂತರ ಬಲಗಾಲನ್ನು ಮಡಚಿ ಬೇಕು ನಂತರ ಎಡಗಾಲನ್ನು ಮಡಿಚಿ ವಿರುದ್ಧ ದಿಕ್ಕಿನಲ್ಲಿ ಇಡಬೇಕು ಚಿತ್ರದಲ್ಲಿರುವಂತೆ, ನಂತರ ನಿಮ್ಮ ಬಲಗೈ ಸಹಾಯದಿಂದ ನಿಮ್ಮ ಎಡಗಾಲಿನ ತುದಿಯನ್ನು ಹಿಡಿದುಕೊಳ್ಳಬೇಕು ಸೊಂಟದ ಭಾಗವನ್ನು ತಿರುಗಿಸಿ ಕಾಲಿನ ತುದಿಯನ್ನು ಹಿಡಿಯಬೇಕು ಎಡಗೈ ನೆಲದ ಮೇಲೆ ಇರಬೇಕು, ಕತ್ತು ಎಡಕ್ಕೆ ತಿರುಗಿಸಬೇಕು ಬೆನ್ನು ನೇರವಾಗಿ ಇರಬೇಕು ಎರಡು ಭುಜಗಳು ಸಮನಾಗಿರಬೇಕು, ಉಸಿರಾಟದ ಕ್ರಿಯೆ ಸಹಜವಾಗಿ ಇರಬೇಕು, ನಂತರ ಎಡ ಷಷ್ಠದ ಭಾಗವು ನೆಲಕ್ಕೆ ತಾಗಬೇಕು ೧೦ ಸೆಂಕೆಡ್ ಗ್ ಳ ಕಾಲ ಇದ್ದು ಇನ್ನೊಂದು ಬದಿಗೆ ಪ್ರಯತ್ನ ಮಾಡಿ.

ಪ್ರಯೋಜನಗಳು:
1)ಮಲಬದ್ಧತೆ ನಿವಾರಣೆಯಾಗುತ್ತದೆ.
2) ಹೊಟ್ಟೆ ತೆಳುವಾಗುವುದರೊಂದಿಗೆ ಬೊಜ್ಜು ಕರಗುತ್ತದೆ.
3) ಅನೇಕ ಉದರರೋಗಗಳು ಈ ಆಸನ ಅಭ್ಯಾಸದಿಂದ ಹಿಡಿತಕ್ಕೆ ಬರುತ್ತವೆ.
4)ಸಕ್ಕರೆ ಖಾಯಿಲೆಗೆ ಉತ್ತಮವಾದ ಆಸನವಾಗಿದೆ.

 

 

 

 

 

 

 

 

 

ವೀರಾಸನ:

ವೀರ :ಶಕ್ತಿವಂತ, ಯೋಧ
ಆಸನ : ಭಂಗಿ

ಮಾಡುವ ವಿಧಾನ:
ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಿ, ನಂತರ ಬಲಗಾಲನ್ನು ಹಿಂದಕ್ಕೆ ಮಡಿಸಿ, ಬಲತೊಡೆಯ ಪಕ್ಕದಲ್ಲಿ ಮೊಣಕಾಲು ಬರುವ ರೀತಿಯಲ್ಲಿ ಇಟ್ಟುಕೊಳ್ಳಿ. ಹಾಗೆ ಎಡಗಾಲನ್ನು ಮಡಿಸಿ ಎಡತೊಡೆಯ ಪಕ್ಕದಲ್ಲಿ ಬರುವ ರೀತಿಯಲ್ಲಿ ಇಟ್ಟುಕೊಳ್ಳಿ ನಂತರ ಬೆನ್ನು ನೇರವಾಗಿ ಇರಬೇಕು, ಎರಡು ಕೈಗಳು ತೊಡೆಯ ಮೇಲೆ ಇರಬೇಕು, ಉಸಿರಾಟದ ಕ್ರಿಯೆ ಸಹಜವಾಗಿ ಇರಬೇಕು, ೧೦. ಸೆಂಕೆಡ್ ಗಳ ಕಾಲ ಇದ್ದು ನಂತರ ದಂಡಾಸನದ ಸ್ಥಿತಿಗೆ ಬನ್ನಿ.

ಪ್ರಯೋಜನಗಳು:
1) ತೊಡೆಗಳು ಬಲಿಷ್ಠವಾಗುತ್ತವೆ.
2) ಬೆನ್ನುಮೂಳೆಯು ಶಕ್ತಿಯುತವಾಗುತ್ತದೆ.
3) ಜೀರ್ಣಕ್ರಿಯೆಯು ಹೆಚ್ವಿಸುತ್ತದೆ.
4) ಜ್ಞಾಪನ ಶಕ್ತಿಯನ್ನು ಹೆಚ್ಚಿಸುತ್ತದೆ.

 

 

 

 

 

 

 

 

 

ಚೈತ್ರಾ ಹಂಪಿನಕಟ್ಟಿ
chaitrah8989@gmail.com

ಈ ಅಂಕಣದ ಹಿಂದಿನ ಬರಹಗಳು:
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...