ದಂಡಿಯಾಮ ಜಾನುಶಿರಾಸನ

Date: 09-10-2023

Location: ಬೆಂಗಳೂರು


ದಂಡಿಯಾಮ ಜಾನುಶಿರಾಸನವು ದೇಹಕ್ಕೆ ಹಲವು ಪ್ರಯೋಜಯನಗಳನ್ನು ನೀಡುವುದರ ಜೊತೆಗೆ ಕಾಲುಗಳು ಬಲಿಷ್ಠಗೊಳ್ಳುತ್ತವೆ. ಹಾಗೇ ಭುಜಂಗಾಸನವನ್ನು ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡಿದರೆ ನಿಯಮಿತ ಮುಟ್ಟಿಗೆ ಸಹಕಾರಿಯಾಗುತ್ತದೆ. ಈ ಎರಡೂ ಆಸನಗಳ ಕುರಿತು ಯೋಗಪಟು ಚೈತ್ರಾ ಹಂಪಿನಕಟ್ಟಿ ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ವಿವರಿಸಿದ್ದಾರೆ.

ದಂಡಿಯಾಮ ಜಾನುಶಿರಾಸನ

ದಂಡಿಯಾಮ ಎಂದರೆ ಒಂದು ನಿರ್ದಿಷ್ಟವಾದ ಸ್ಥಿತಿ,
ಜಾನು : ಮೊಣಕಾಲು
ಶಿರ : ತಲೆ
ಆಸನ : ಭಂಗಿ

ಮಾಡುವ ವಿಧಾನ:

ಮೊದಲು ತಾಡಾಸನದಲ್ಲಿ ನಿಂತುಕೊಳ್ಳಬೇಕು, ನಂತರ ಉಸಿರನ್ನು ತೆಗೆದುಕೊಂಡು ಎರಡು ಕೈಗಳ ಸಹಾಯದಿಂದ ಬಲಗಾಲನ್ನು ಮಡಿಚಿ ತುದಿಯನ್ನು ಹಿಡಿದುಕೊಳ್ಳಬೇಕು ಮೊಣಕಾಲನ್ನು ನೇರ ಮಾಡುತ್ತಾ, ನಿಮ್ಮ ತಲೆಯನ್ನು ನಿಧಾನವಾಗಿ ಉಸಿರು ಬಿಡುತ್ತಾ ಮುಂದಕ್ಕೆ ಬಾಗಿ ಮೊಣಕಾಲಿಗೆ ತಾಗಿಸಬೇಕು ಎಡಗಾಲು ನೇರವಾಗಿರಬೇಕು, ಬೆನ್ನು ನೇರವಾಗಿರಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು. ೧೦ ಸೆಂಕೆಡ್ ಗಳ ಕಾಲ ಹಾಗೇ ಇದ್ದು ನಂತರ ಇನ್ನೊಂದು ಬದಿ ಪ್ರಯತ್ನಿಸಬೇಕು.

ಪ್ರಯೋಜನಗಳು:
1) ಕೋರ್ ಶಕ್ತಿ ಮತ್ತು ಸ್ಥಿರತೆಯನ್ನು ಸುಧಾರಿಸುತ್ತದೆ.
2) ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
3) ಕಾಲುಗಳು ಬಲಿಷ್ಠಗೊಳ್ಳುತ್ತವೆ.
4) ಮಂಡಿರಜ್ಜುಗಳನ್ನು ಉದ್ದವಾಗಿಸುತ್ತದೆ.
5) ಸಮತೋಲನ ಮತ್ತು ಗಮನವನ್ನು ಸುಧಾರಿಸುತ್ತದೆ.
6) ಬೆನ್ನುಮೂಳೆಯನ್ನು ಬಲಪಡಿಸುತ್ತದೆ‌.

 

 

 

 

 

 

 

 

 

 

 

ಭುಜಂಗಾಸನ

ಸಂಸ್ಕೃತದಲ್ಲಿ ಭುಜಂಗ ಅಂದರೆ ಸರ್ಪ ಎಂದರ್ಥ ಮತ್ತು ಆಸನ ಎಂದರೆ ಭಂಗಿ ಎಂದರ್ಥ.

ಮಾಡುವ ವಿಧಾನ:

ಮೊದಲು ಬೋರಲಾಗಿ ಮಲಗಬೇಕು, ನಂತರ ಎರಡು ಕಾಲುಗಳನ್ನು ಕೂಡಿಸಿಬೇಕು ನಂತರ ಎರಡು ಕೈಗಳು ಎದೆಯ ಅಕ್ಕಪಕ್ಕದಲ್ಲಿ ಇಡಬೇಕು, ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಂಡು ಎರಡು ಕೈಗಳನ್ನು ನೆಲಕ್ಕೂರಿ ನೇರ ಮಾಡುತ್ತಾ ಭುಜವನ್ನು ಮೇಲಕ್ಕೆತ್ತಬೇಕು. ಉಸಿರಾಟದ ಕ್ರಿಯೆ ಸಹಜವಾಗಿ ಇರಬೇಕು, ೧೦ ಸೆಂಕೆಡ್ ಗಳ ಕಾಲ ಹಾಗೇ ಇದ್ದು ನಂತರ ಸಮಸಿತ್ಥಿಗೆ ಬರಬೇಕು.

ಪ್ರಯೋಜನಗಳು:
1) ಬೆನ್ನು, ಎದೆ, ಹೊಟ್ಟೆಯ ಭಾಗದ ನರಗಳನ್ನು ಬಲಪಡಿಸುವುದು.
2) ಸೊಂಟದ ನರಗಳ ಬಿಗಿ ಕಡಿಮೆ ಮಾಡುವುದರಿಂದ ಸೊಂಟ ನೋವು ಇರುವವರು ಈ ಆಸನ ಅಭ್ಯಾಸ ಮಾಡುವುದು ಒಳ್ಳೆಯದು.
3) ಭುಜವನ್ನು ಬಲಪಡಿಸುತ್ತದೆ.
4) ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡಿದರೆ ನಿಯಮಿತ ಮುಟ್ಟಿಗೆ ಸಹಕಾರಿ.
5) ಹಿಂಭಾಗದ ನರವನ್ನು ಬಲ ಪಡಿಸುತ್ತದೆ.
6. ಉಸಿರಾಟದ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶಗಳು ಹಾಗೂ ಹೃದಯ ಚೈತನ್ಯಗೊಳ್ಳುವುದು, ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುವುದು.

 

 

 

 

 

 

 

 

 

 

 

 

 

 

 

 

 

 

 

 

ಈ ಅಂಕಣದ ಹಿಂದಿನ ಬರಹಗಳು:
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

ಚೈತ್ರಾ ಹಂಪಿನಕಟ್ಟಿ
Chaitrah220@gmail.com

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...