ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ

Date: 16-10-2023

Location: ಬೆಂಗಳೂರು


''ಅಧೋಮುಖ ಶ್ವಾನಾಸನ ಹೆಸರು ಸಂಸ್ಕೃತದಿಂದ ಬಂದಿದ್ದು, ಅಧೋಮುಖ ಶ್ವಾನಾಸನ ಎಂದರೆ ಅದನ್ನು ನಾಯಿ ಭಂಗಿ ಎಂದೂ ಕರೆಯಲಾಗುತ್ತದೆ. ಸುಪ್ತ ವಜ್ರಾಸನ ಬೆನ್ನುಮೂಳೆಯ ಮತ್ತು ಸೊಂಟದ ನಮ್ಯತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ತೊಡೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ. ಈ ಎರಡೂ ಆಸನಗಳ ಕುರಿತು ಯೋಗಪಟು ಚೈತ್ರಾ ಹಂಪಿನಕಟ್ಟಿ ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ವಿವರಿಸಿದ್ದಾರೆ.''

ಅಧೋಮುಖ ಶ್ವಾನಾಸನ

ಅಧೋ : ಮುಖ
ಶ್ವಾನ : ನಾಯಿ

ಸಂಸ್ಕೃತದಿಂದ ಬಂದಿದೆ, ಅಧೋಮುಖ ಶ್ವಾನಾಸನ ಎಂದರೆ ಅದನ್ನು ನಾಯಿ ಭಂಗಿ ಎಂದೂ ಕರೆಯಲಾಗುತ್ತದೆ.

ಮಾಡುವ ವಿಧಾನ:

ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ, ನಂತರ ನಿಮ್ಮ ಕೈಗಳನ್ನು ಮುಂದೆ ಇಟ್ಟು ಮುಂದಕ್ಕೆ ಬಾಗಿ, ಮೊಣಕಾಲಿನ ಮೇಲೆ ಬಂದು ನಂತರ ಸೊಂಟದ ಭಾಗವನ್ನು ಮೇಲಕ್ಕೆ ಎತ್ತಬೇಕು. ಮೊಣಕಾಲು ನೇರವಾಗಿರಬೇಕು, ಎರಡು ಕೈಗಳು ನೇರವಾಗಿರಬೇಕು. ದೇಹವು ವಿ ಆಕಾರದಲ್ಲಿ ಇರಬೇಕು, ಪಾದಗಳು ಸಮನಾಗಿರಬೇಕು, ನೆಲಕ್ಕೆ ತಾಗಬೇಕು, ದೃಷ್ಟಿ ಕೆಳಗೆ ಇರಬೇಕು ಉಸಿರಾಟದ ಕ್ರಿಯೆಯು ಸಹಜವಾಗಿರಬೇಕು. 10 ಸೆಂಕೆಡ್ ಕಾಲ ಇದ್ದು, ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ ಚಿತ್ರದಲ್ಲಿ ಇರುವಂತೆ.

ಪ್ರಯೋಜನಗಳು:
1) ಸ್ನಾಯುಗಳನ್ನು ಬಿಗಿ ಹಾಗೂ ಬಲಪಡಿಸಲು ನೆರವಾಗುವುದು.
2) ಅಧೋಮುಖ ಶ್ವಾನಾಸನವು ತಲೆಕೆಳಗೆ ಮಾಡುವುದರಿಂದ ಸೊಂಟವನ್ನು ಮೇಲಕ್ಕೆ ಎತ್ತಿ ತಲೆಯನ್ನು ಹೃದಯದ ಕೆಳಭಾಗಕ್ಕೆ ತರುವುದರಿಂದ ಗುರುತ್ವಾಕರ್ಷಣೆಯು ಎಳೆಯಲ್ಪಡುವುದು ಮತ್ತು ಇದರಿಂದ ರಕ್ತಸಂಚಾರವು ಸುಗಮವಾಗುವುದು.
3) ಜೀರ್ಣಕ್ರಿಯೆ ಹೆಚ್ಚುತ್ತದೆ.
4)ಆತಂಕವನ್ನು ಕಡಿಮೆಮಾಡುತ್ತದೆ.

 

 

 

 

 

 

 

 

 

ಸುಪ್ತ ವಜ್ರಾಸನದ

ಸುಪ್ತ ವಜ್ರಾಸನ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ.

ಸುಪ್ತ : ಎಂದರೆ ಒರಗಿಕೊಂಡ ಅಥವಾ ಮಲಗುವುದು.
ವಜ್ರ : ಎಂದರೆ ಬಲಿಷ್ಠವಾದ
ಆಸನ : ಎಂದರೆ ಭಂಗಿ.

ಮಾಡುವ ವಿಧಾನ:
ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಿ, ನಂತರ ಎಡಗಾಲಿನ ಮಂಡಿಯನ್ನು ಮಡಿಚಿ ನೆಲಕ್ಕೆ ಉರಬೇಕು, ನಂತರ ಬಲಗಾಲಿನ ಮಂಡಿಯನ್ನು ಮಡಿಚಿ ನೆಲಕ್ಕೂರಬೇಕು ನಂತರ ಬೆನ್ನು ನೇರವಾಗಿ ಇರಬೇಕು, ನಂತರ ಎರಡು ಮೊಣಕೈ ನೆಲಕ್ಕೆ ಊರಬೇಕು ನಂತರ ನಿಧಾನವಾಗಿ ಬೆನ್ನಿನ ಮೇಲೆ ಮಲಗಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು, ೧೦ ಸೆಂಕೆಡ್ ಗಳ ಕಾಲ ಇದ್ದು, ನಂತರ ವಜ್ರಾಸದ ಸ್ಥಿತಿಗೆ ಬನ್ನಿ.

ಪ್ರಯೋಜನಗಳು:
1) ಬೆನ್ನುಮೂಳೆಯ ಮತ್ತು ಸೊಂಟದ ನಮ್ಯತೆಯನ್ನು ಹೆಚ್ಚಿಸುತ್ತದೆ.
2) ತೊಡೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ.
3) ಶ್ವಾಸಕೋಶವನ್ನು ಬಲಪಡಿಸುತ್ತದೆ ಮತ್ತು ಅಸ್ತಮಾ ಮತ್ತು ಬ್ರಾಂಕೈಟಿಸ್‌ಗೆ ಸಹಕಾರಿಯಾಗಿದೆ.
4) ಕಾಲುಗಳು ಮತ್ತು ತೊಡೆಯು ಬಲಿಷ್ಠವಾಗುತ್ತದೆ.

 

 

 

 

 

 

 

 

 

ಚೈತ್ರಾ ಹಂಪಿನಕಟ್ಟಿ
chaitrah8989@gmail.com

ಈ ಅಂಕಣದ ಹಿಂದಿನ ಬರಹಗಳು:
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...