ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್

Date: 01-09-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಟ್ರಿನಿಡಾಡ್ ಮೂಲದ ಪೇಂಟಿಂಗ್ ಕಲಾವಿದ ಪೀಟರ್ ಡಾಯ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಪೀಟರ್ ಡಾಯ್ (Peter Doig)
ಜನನ: 17 ಎಪ್ರಿಲ್, 1959
ಶಿಕ್ಷಣ: ವಿಂಬಲ್ಡನ್, ಸೈಂಟ್ ಮಾರ್ಟಿನ್ಸ್ ಮತ್ತು ಚೆಲ್ಸೀ ಸ್ಕೂಲ್ ಆಫ್ ಆರ್ಟ್
ವಾಸ: ಟ್ರಿನಿಡಾಡ್
ಕವಲು: ಮ್ಯಾಜಿಕಲ್ ರಿಯಲಿಸಂ
ವ್ಯವಸಾಯ: ಪೇಂಟಿಂಗ್

ಪೀಟರ್ ಡಾಯ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

2007ರಲ್ಲಿ ತನ್ನ White Canoe ಪೇಂಟಿಂಗಿಗೆ ಸೂದ್‌ಬಿ ಹರಾಜುಕಟ್ಟೆಯಲ್ಲಿ 83.87 ಕೋಟಿ ರೂ.ಗಳನ್ನು ಗಳಿಸಿಕೊಂಡ ಪೀಟರ್‌ಗೆ ಈ ದಾಖಲೆ ಸ್ಥಾಪನೆ ಆದದ್ದನ್ನು ನಂಬಲಾಗಿರಲಿಲ್ಲ. ಆ ಬಳಿಕ ತನ್ನ ಸ್ಟುಡಿಯೋದಲ್ಲಿ ಕೆಲಸ ಮಾಡುವಾಗಲೆಲ್ಲ ಈ ದಾಖಲೆ ತನ್ನಲ್ಲಿ ವಿಚಿತ್ರ ಒತ್ತಡ ಉಂಟುಮಾಡುತ್ತಿತ್ತು; ತಾನು ಮಾಡಿದ ಚಿತ್ರಗಳು ಕೋಟಿಗಟ್ಟಲೆ ಮೌಲ್ಯದ ಕಲಾಕೃತಿಗಳಾಗಿರುವುದರಿಂದ ತಾನು ಕಲಾಕೃತಿಗಳನ್ನು ರಚಿಸುವ ವೇಳೆ ಒತ್ತಡಕ್ಕೀಡಾಗುತ್ತಿದ್ದೆ ಎಂದು ಅವರು ಹೇಳಿದ್ದಿದೆ.

ಆಧುನಿಕ ಕಲಾಜಗತ್ತಿನಲ್ಲಿ ಒಂದು ಕಾಲದಲ್ಲಿ ಪೀಟರ್ ಅವರ ಹಳೆಯ ಕಾಲದ್ದೆನ್ನಿಸುವ ಕಲಾಕೃತಿಗಳ ಜೊತೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವುದಕ್ಕೆ ಪ್ರಮುಖ ಕಲಾವಿದರು ಹಿಂಜರಿಯುತ್ತಿದ್ದರು, ಹಾಗೆ ಮಾಡಿದರೆ ತಮ್ಮ ಕಲಾಕೃತಿಗಳೂ ಹಿಂದುಳಿಯಲಿವೆ ಎಂಬ ಭಯ ಅವರಲ್ಲಿತ್ತು. ಅಂತಹದೊಂದು ಸ್ಥಿತಿಯಿಂದ ಕಲಾಜಗತ್ತಿನಲ್ಲಿ ಇಂದು “ಅತ್ಯಂತ ಮಹತ್ವದ ಸಮಕಾಲೀನ ಫಿಗರೇಟಿವ್ ಪೇಂಟಿಂಗ್‌ಗಳ ಕಲಾವಿದ” ಅನ್ನಿಸಿಕೊಂಡಿರುವ ಪೀಟರ್ ಡಾಯ್ ಅವರ ಮಹತ್ವದ ಸಾಧನೆ ಎಂದರೆ, ಸಾಂಪ್ರದಾಯಿಕ ಪೇಂಟಿಂಗ್‌ಗಳಿಗೆ ಸಮಕಾಲೀನ ಕಲಾಜಗತ್ತಿನಲ್ಲಿ ಸ್ಥಾನವನ್ನು ಮರಳಿ ದೊರಕಿಸಿಕೊಟ್ಟದ್ದು.

ಫಿಗರೇಟಿವ್ ಪೇಂಟಿಂಗ್‌ಗಳಲ್ಲೇ ಅಮೂರ್ತತೆಯನ್ನೂ ಒಳಗೊಂಡು, ಢಾಳಾದ ಬಣ್ಣಗಳ ಸಹಿತ ತನ್ನ ಸಮಕಾಲೀನರಿಗಿಂತ ಭಿನ್ನವಾಗಿ ಚಿತ್ರಗಳನ್ನು ಕಟ್ಟಿಕೊಡುವ ಪೀಟರ್ ಅವರ ಚಿತ್ರಗಳಲ್ಲಿ ಪರಿಸರ ಪ್ರಧಾನವಾಗಿದ್ದು, ಮನುಷ್ಯ ರೂಪಗಳು ಗೌಣ. ಆದರೆ, ತನ್ನದೇ ಬದುಕಿನ ಕುರಿತಾದ ಸಂಗತಿಗಳನ್ನೂ ಮ್ಯಾಜಿಕಲ್ ಆಗಿ, ಕಾವ್ಯಾತ್ಮಕವಾಗಿ ಕಥೆಯ ರೂಪದಲ್ಲಿ ಕಟ್ಟಿಕೊಡುವ ಶಕ್ತಿ ಆ ಚಿತ್ರಗಳಲ್ಲಿದೆ.

ಶಿಪ್ಪಿಂಗ್ ಉದ್ಯೋಗದಲ್ಲಿದ್ದ ತಂದೆಯ ಕಾರಣದಿಂದಾಗಿ ಬಾಲ್ಯದಲ್ಲಿ ಹುಟ್ಟಿದ ಎಡಿನ್‌ಬರೊ, ಅಲ್ಲಿಂದ ಟ್ರಿನಿಡಾಡ್, ಕೆನಡಾ ಎಂದು ಊರಿಂದೂರಿಗೆ ಸಂಚರಿಸುತ್ತಿದ್ದ ಪೀಟರ್ ಕುಟುಂಬ ಮಧ್ಯಮ ವರ್ಗದ್ದು. ಬಾಲ್ಯದಲ್ಲಿ ಪೀಟರ್ ಸಮಸ್ಯಾತ್ಮಕ ಬಾಲಕ. ಮಾದಕ ದ್ರವ್ಯ ವ್ಯಸನ, ಅಲೆಮಾರಿತನ ಮತ್ತಿತರ ಕಾರಣಗಳಿಂದಾಗಿ ಎಳವೆಯಲ್ಲಿ ಶಾಲೆಯಿಂದ ಹೊರಬಿದ್ದು ಗ್ಯಾಸ್ ರಿಗ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಆರಂಭಿಸುತ್ತಾರೆ. ಅಲ್ಲಿ ಮೊದಲ ಬಾರಿಗೆ ತನ್ನಲ್ಲಿ ಕಲಾ ಪ್ರತಿಭೆ ಇದೆ ಎಂದು ಅವರಿಗೆ ಅರಿವಾದಾಗ, ಆರ್ಟ್ ಸ್ಕೂಲ್ ಸೇರುತ್ತಾರೆ. ಪೀಟರ್ ತನ್ನ 31ರ ಹರೆಯದಲ್ಲಿ ಬ್ರಿಟನ್‌ಗೆ ಹಿಂದಿರುಗಿ ಚೆಲ್ಸೀ ಆರ್ಟ್ ಸ್ಕೂಲ್ ಸೇರುವ ವೇಳೆಗೆ, ಬ್ರಿಟನ್‌ನಲ್ಲಿ ಯಂಗ್ ಬ್ರಿಟಿಷ್ ಆರ್ಟಿಸ್ಟ್ (ಙಃಂ) ಚಳುವಳಿ ಉತ್ತುಂಗದಲ್ಲಿತ್ತು.

ಅಲ್ಲಿನ ಕಲಾವಿದರ ಜೊತೆ ಕಲಾಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಪೀಟರ್‌ಗೆ ಮುಜುಗರ ತರುತ್ತಿತ್ತು. ಏಕೆಂದರೆ, ಅವರು ಪೀಟರ್ ಜೊತೆ ಪ್ರದರ್ಶನಕ್ಕೆ ಹಿಂಜರಿಯುತ್ತಿದ್ದರು. ಅವು ಹಳೆಯ ಕಾಲದ ಚಿತ್ರಗಳು ಎಂಬ ಭಾವನೆ ಅಲ್ಲಿ ಮನೆಮಾಡಿತ್ತು. ಇದು ಸುಮಾರು 1990ರ ತನಕವೂ ಮುಂದುವರಿದಿತ್ತು. 2002ರಲ್ಲಿ ಟ್ರಿನಿಡಾಡ್‌ಗೆ ತೆರಳಿ ನೆಲೆಸಿದ ಪೀಟರ್ ತನ್ನ ಬಾಲ್ಯದ ಗೆಳತಿ ಬರ್ನಾರ್ಡೆತ್ ಕೆನಡಿ ಜೊತೆ ಮದುವೆ 2012ರ ಹೊತ್ತಿಗೆ ಮುರಿದು ಬಿದ್ದ ಬಳಿಕ, 2015ರಲ್ಲಿ ತನ್ನ ಕ್ಯುರೇಟರ್ ಸಂಗಾತಿ ಪರಿನಾಸ್ ಮೊಗದಾಸಿ ಅವರೊಂದಿಗೆ ಬದುಕು ಆರಂಭಿಸಿದರು.

ಈವತ್ತಿಗೂ ಬಣ್ಣಗಳು, ಕಂಪೊಸಿಷನ್, ಫಿಗರೇಟಿವ್ ಚಿತ್ರಗಳು ಪ್ರಸ್ತುತ ಎಂಬುದನ್ನು ಸಮಕಾಲೀನ ಕಲಾಜಗತ್ತಿನ ಎಳೆಯರಿಗೆ ತೋರಿಸಿಕೊಟ್ಟ ಪೀಟರ್, ಈಗ ಟ್ರಿನಿಡಾಡಿನ ಸ್ಟುಡಿಯೋದಿಂದ ಕಾರ್ಯಾಚರಿಸುತ್ತಿದ್ದಾರೆ. ಅವರು ಜರ್ಮನಿಯ ಡಸಲ್‌ಡಾರ್ಫ್‌ನಲ್ಲಿ ಫೈನ್ ಆರ್ಟ್ಸ್ ಅಕಾಡೆಮಿಯಲ್ಲಿ ಪ್ರೊಫೆಸರ್ ಆಗಿಯೂ ಸ್ವಲ್ಪಕಾಲ ಕೆಲಸ ಮಾಡಿದ್ದಾರೆ.

ನಿಮ್ಮ ಕಲಾಕೃತಿಗಳಿಂದ ನಿಮ್ಮ ಕಲಿಕೆ ಏನು ಎಂಬ ಪ್ರಶ್ನೆಗೆ ಪೀಟರ್ ಉತ್ತರಿಸಿದ್ದು ಹೀಗೆ:I’m questioning where I am in the world, where I live in the world, thinking about other people, thinking about their situations. I think what I am doing is important—not because painting is important. As an activity, it’s important to actually do something. I feel guilty if I’m not painting. Once you succumb to painting, you have to carry on with it. Gerhard Richter said something very interesting to me—I’m not a huge fan of Gerhard Richter’s work, but he said, if you think about it too much, you stop doing it. That’s a great way of thinking about painting. You have to put your blinkers on, and stop thinking. (ಕೆನಡೀಯನ್ ಆರ್ಟ್ ವೆಬ್ ಪತ್ರಿಕೆಗೆ 2014 ಜನವರಿಯಲ್ಲಿ ನೀಡಿದ ಸಂದರ್ಶನ. ಸಂದರ್ಶಕರು: jbmaysbklein)

ಪೀಟರ್ ಡಾಯ್ ಅವರ ಜೊತೆ ಕ್ಯುರೇಟರ್ ಜಸ್ಪರ್ ಶಾರ್ಪ್ ಮಾತುಕತೆ:

ಪೀಟರ್ ಡಾಯ್ ಅವರ ಜೊತೆ ಕ್ಯುರೇಟರ್ ಉಲ್ಫ್ ಕುಸ್ತರ್ ಮಾತುಕತೆ:

ಚಿತ್ರ ಶೀರ್ಷಿಕೆಗಳು

ಪೀಟರ್ ಡಾಯ್ ಅವರ 100 years ago (2000)

ಪೀಟರ್ ಡಾಯ್ ಅವರ Architects home in the Ravine (1991)

ಪೀಟರ್ ಡಾಯ್ ಅವರ canoe-lake (1997)

ಪೀಟರ್ ಡಾಯ್ ಅವರ Concrete cabin II (1992)

ಪೀಟರ್ ಡಾಯ್ ಅವರ Fisherman (2014)

ಪೀಟರ್ ಡಾಯ್ ಅವರ grass hopper (1990)

ಪೀಟರ್ ಡಾಯ್ ಅವರ Lapeyrouse Wall (2004)

ಪೀಟರ್ ಡಾಯ್ ಅವರ Oranga sunshine (1995)

ಪೀಟರ್ ಡಾಯ್ ಅವರ Two trees (2017)

ಪೀಟರ್ ಡಾಯ್ ಅವರ untitled (2006)

ಪೀಟರ್ ಡಾಯ್ ಅವರ White Canore (1990-91)

ಪೀಟರ್ ಡಾಯ್ ಅವರ White Creep (1995-96)

ಈ ಅಂಕಣದ ಹಿಂದಿನ ಬರೆಹಗಳು:
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...