About the Author

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು. 

ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು. 

ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ಕಣಿಗಿಲು ಮತ್ತಿತರ ನಾಟಕಗಳು-2009,  ಆಂದ್ರೋಸಿನ ಕನ್ಯೆ ಮತ್ತು ಪೋರ್ಮಿಯೊ- 2011 ಹಾಗೂ ಸಂಪಾದಿತ ಕೃತಿಗಳು: ವಾತ್ಸಲ್ಯ (ಡಾ. ಪಂಚಾಕ್ಷರಿ ಹಿರೇಮಠ ಅವರ ಅಭಿನಂದನಾ ಗ್ರಂಥ-1996), ವಿಮರ್ಶಾ ಗ್ರಂಥಗಳು: ಕನ್ನಡ ಅಸಂಗತ ನಾಟಕಗಳು-1990, ಸಂರಚನಾವಾದ- 1999,  ಅಸಂಗತ-2002,  ಶ್ರೀ ಕನಕದಾಸರು- 2006, ಸಿದ್ಧಾಂತ ಮತ್ತು ಪ್ರಯೋಗ-2006 ಮತ್ತು ಸೃಜನಾತ್ಮಕ ಸಾಹಿತ್ಯ: ಸ್ವಾತಂತ್ರ್ಯದ ಕನಸುಗಾರ (ನರಗುಂದದ ಬಾಬಾ ಸಾಹೇಬರನ್ನು ಕುರಿತ ಐತಿಹಾಸಿಕ ನಾಟಕ-2007,),  ಸ್ವಾತಂತ್ರ್ಯ ಭಾಸ್ಕರ (ನರಗುಂದ ಬಾಬಾಸಾಹೇಬರನ್ನು ಕುರಿತ ಐತಿಹಾಸಿಕ ಕಾದಂಬರಿ-2010), ಕಿತ್ತೂರಿನ ವೀರರಾಣಿ (ಚೆನ್ನಮ್ಮ ರಾಣಿಯನ್ನು ಕುರಿತ ಐತಿಹಾಸಿಕ ನಾಟಕ-2011)

ಇಂಗ್ಲೀಷ, ಸೃಜನಾತ್ಮಕ ಸಾಹಿತ್ಯ ಕೃತಿಗಳು: The Thief of Nagarahalli and other stories,-2008,  The Rebellious Rani of Belawadi and other Stories-2001, The Sun behind the cloud - 2001,  A dreamer of freedom- 2009, The queen of Kittur- 2009,  Light in the house - 2010,     Rayanna, Patriot and other Novellas ಹೀಗೆ ಹತ್ತು ಹಲವು ಆಂಗ್ಲ ಕೃತಿಗಳನ್ನು ರಚಿಸಿದ್ದಾರೆ.

ಅನುವಾದಿತ ಕೃತಿಗಳು: Musings of Sarvajna,-1990, Fall of Kalyana -2005), Sangya Balya : A Tale of love and Betrayal- 2008 ಮತ್ತು ಇತರೆ ಕೃತಿಗಳು, ವಿಮರ್ಶೆ ಗ್ರಂಥಗಳು:  Sarvajna ,The Poet Ommiscient of Karnataka-1984,  Critical Articles on Nirad C. Chaudhuri-1985,  Sparrows- 1986,  Sandalwood -1988)) ಹೀಗೆ ಇತರೆ ಕೃತಿಗಳು, ಪುಸ್ತಕ ವಿಮರ್ಶೆ: The World Literature Today (Oklahoma, USA) , ಅಮೆರಿಕದ ತ್ರೈಮಾಸಿಕ ಪತ್ರಿಕೆಗೆ 36 ವರ್ಷದಿಂದ ಭಾರತೀಯ ಸಾಹಿತ್ಯ ಕೃತಿಗಳ ಸಮೀಕ್ಷೆ ಮಾಡುತ್ತಿದ್ದಾರೆ. 

ಪ್ರಶಸ್ತಿಗಳು:  ಗುಲಬರ್ಗಾ ವಿ.ವಿ. ಪ್ರಶಸ್ತಿ, ಜೆಮಿಜಿ ಅಕಾಡೆಮಿ ಪ್ರಶಸ್ತಿ ಪಾಣಿಪತ್, ಹೈದರಾಬಾದಿನ ಆಲಿವ್ ರೆಡಿಕ್ ಪ್ರಶಸ್ತಿ, ಬೆಂಗಳೂರಿನ ವಸುದೇವ ಭೂಪಾಲಂ ಪ್ರಶಸ್ತಿ ಸೇರಿದಂತೆ ಇತರೆ ಗೌರವಗಳು ಲಭಿಸಿವೆ. 

ಬಸವರಾಜ ನಾಯ್ಕರ

(01 Aug 1949)

Books by Author