ಬೆಳವಡಿಯ ವೀರರಾಣಿ ಮತ್ತಿತರ ಕಥೆಗಳು

Author : ಬಸವರಾಜ ನಾಯ್ಕರ

Pages 397

₹ 400.00




Year of Publication: 2017
Published by: ಗೀತಾಂಜಲಿ ಪ್ರಕಾಶನ,
Address: # 60 2ನೇ ಡಿ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು, -560 072
Phone: 9740066842

Synopsys

ಬೆಳವಡಿಯ ವೀರರಾಣಿ ಮತ್ತಿತರ ಕಥೆಗಳು-ಕಥಾ ಸಂಕಲನವನ್ನು ಡಾ. ಬಸವರಾಜ ನಾಯ್ಕರ ಅವರು ರಚಿಸಿದ್ದು, 10 ಕಥೆಗಳನ್ನು ಒಳಗೊಂಡಿದೆ. ಐತಿಹಾಸಿಕ ಕಥೆಗಳೂ ಒಳಗೊಂಡಂತೆ ನಗರ-ಗ್ರಾಮೀಣ-ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ವಲಯ ವಿಷಯ ವಸ್ತುಆಧಾರಿತ ಕಥೆಗಳಿವೆ, ಉತ್ತರ ಕರ್ನಾಟಕದ ಭಾಷೆ-ಜೀವನ ಶೈಲಿಯ ಸೊಗಸು ಇಲ್ಲಿಯ ಕಥೆಗಳ ಜೀವಾಳವಾಗಿವೆ. 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books