ಭಾರತೀಯ ಸಮಾಜ

Author : ಆರ್. ಇಂದಿರಾ

Pages 135

₹ 16.00




Year of Publication: 1995
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಭಾರತೀಯ ಸಾಮಾಜಿಕ ವ್ಯವಸ್ಥೆಯು ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯ ಒಂದಿದ್ದರೂ, ಭೇದಭಾವ , ಜಾತಿ ತಾರತಮ್ಯ, ವರ್ಗ ತಾರತಮ್ಯ, ಹಲವು ವೈರುಧ್ಯಗಳು ಒಟ್ಟು ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆ ಸಿಲುಕಿಕೊಂಡಿದೆ ಎಂಬು‌ದನ್ನು ಪುರಾವೆ ಸಮೇತ ಸೂಕ್ತ ಉದಾಹರಣೆಗಳೊಂದಿಗೆ ಡಾ.ಆರ್.ಇಂದಿರಾ ರವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಜಾತಿ, ಧರ್ಮ, ವರ್ಗ, ವರ್ಣಗಳ ತಾರತಮ್ಯವು ಭಾರತೀಯ ಸಮಾಜದ ಮೇಲೆ ಯಾವ ರೀತಿಯಲ್ಲಿ ಕೆಟ್ಟ ಪರಿಣಾಮವನ್ನು ಬೀರಿದೆ ಎಂಬೂದನ್ನು ಲೇಖಕರು ಈ ಕೃತಿಯಲ್ಲಿ ಅಂಕಿ ಅಂಶಗಳ ಸಮೇತ ಮಾಹಿತಿಯನ್ನು ಒದಗಿಸಿದ್ದಾರೆ.

About the Author

ಆರ್. ಇಂದಿರಾ
(22 April 1952)

ಸಮಾಜಶಾಸ್ತ್ರಜ್ಞೆ, ಸಾಹಿತಿ ಆರ್‌. ಇಂದಿರಾ ಅವರು ಜನಿಸಿದ್ದು 1952 ಏಪ್ರಿಲ್‌ 22ರಂದು. ಮೂಲತಃ ಮೈಸೂರಿನವರಾದ ಇಂದಿರಾ ಅವರು ಮೈಸೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ, ಮಹಿಳಾ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ದಿ ಸೆಕೆಂಡ್‌ ಕೊರ್ಟ್‌‌ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇವರ ಭಾರತೀಯ ಸಮಾಜ ಇವರ ಪ್ರಮುಖ ಕೃತಿಯಾಗಿದೆ. ಇವರಿಗೆ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಒಲಿದು ಬಂದಿದೆ.  ...

READ MORE

Related Books