ಮಾಲ ಸನ್ಯಾಸಿ

Author : ಪಾರ್ವತೀಶ ಬಿಳಿದಾಳೆ

Pages 257

₹ 100.00




Year of Publication: 2017
Published by: ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ
Address: ಸಮಾಜ ಕಲ್ಯಾಣ ಇಲಾಖೆ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಡಾ. ಬಿ.ಆರ್. ಅಂಬೇಡ್ಕರ್ ಭವನ ವಸಂತ ನಗರ, ಬೆಂಗಳೂರು 560 052
Phone: 080-22204821

Synopsys

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚು ಕಂಡು ಬರುವ ಮಾಲ ಸನ್ಯಾಸಿ ಎಂಬ ಅಲೆಮಾರಿ ಸಮುದಾಯದ ಬಗ್ಗೆ ಬಿಳಿದಾಳೆ ಈಶ ಎಂದೇ ಪ್ರಸಿದ್ಧರಾದ ಹಿರಿಯ ಪತ್ರಕರ್ತ ಪಾರ್ವತೀಶ ಅವರು ಬರೆದ ಕೃತಿ ಇದು. 
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಹರಡಿಕೊಂಡಿರುವ ಬೇಟೆಯನ್ನೇ ವೃತ್ತಿ ಮಾಡಿಕೊಂಡಿರುವ ೀ ಸಮುದಾಯದ ಸಂಸ್ಕೃತಿಯನ್ನು ಹಲವು ವಿವರಗಳಲ್ಲಿ ಕೃತಿಕಾರ ನೀಡಿದ್ದಾರೆ. ಮದುವೆ, ಜನನ, ಸಾವು, ದೈವಾಚಾರಣೆ, ಬೇಟೆ, ಆಹಾರ, ನಾಟಿವೈದ್ಯ ಪದ್ಧತಿ, ಕುಲ ನ್ಯಾಯ ಮೊದಲಾದ ವಿಷಯಗಳನ್ನು ಚರ್ಚಿಸಿದ್ದಾರೆ. 

 

About the Author

ಪಾರ್ವತೀಶ ಬಿಳಿದಾಳೆ

ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...

READ MORE

Related Books