ಮಾಂಗ್ ಗಾರುಡಿ

Author : ಹರ್ಷಕುಮಾರ್‌ ಕುಗ್ವೆ

Pages 304

₹ 100.00




Year of Publication: 2017
Published by: ಡಾ.ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ
Address: ಬೆಂಗಳೂರು
Phone: 9008401873

Synopsys

ಕಳೆದ ಒಂದು ಶತಮಾನದಿಂದೀಚೆಗೆ ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಕರ್ನಾಟಕಕ್ಕೆ ವಲಸೆ ಬಂದ ಮಾಂಗ್‌ ಗಾರುಡಿ ಸಮುದಾಯವು ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿದೆ.  ಎಮ್ಮೆ ಕೋಣಗಳ ವ್ಯಾಪಾರ, ಎಮ್ಮೆಯ ಮೈ ಕೂದಲು ಬೋಳಿಸುವುದು, ಕಕ್ಕಸು ಚಾಚುವ, ಚರಂಡಿ ಸ್ಚಚ್ಛ ಮಾಡುವ, ಸೇಂದಿ ಮಾರುವ ಕೆಲಸಗಳನ್ನು ಈ ಸಮದಾಯವು ಉಪ ಕಸುಬಾಗಿ ಮಾಡಿಕೊಂಡಿದೆ. ಸ್ವಂತ ನೆಲೆಯಿಲ್ಲದ ಈ ಸಮುದಾಯವು ಯಾವುದೇ ಕ್ಷಣದಲ್ಲಿ ಎತ್ತಂಗಡಿಯಾಗುವ ಭಯದಲ್ಲಿ ಬದುಕುತ್ತಿದ್ದಾರೆ. ಕನಿಷ್ಠ ಮೂಲ ಸೌಕರ್ಯಗಳು ಕೂಡ ದೊರೆಯದೆ ಕಷ್ಟದಿಂದ ದಿನ ದೂಡುತ್ತಿದ್ದಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಯುವ ಲೇಖಕ ಹರ್ಷಕುಮಾರ್‌ ಕುಗ್ವೆ ಅವರು ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ, ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. 

About the Author

ಹರ್ಷಕುಮಾರ್‌ ಕುಗ್ವೆ
(15 July 1981)

ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಹರ್ಷಕುಮಾರ ಅವರು ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತ.  ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಎ. ಪದವೀಧರರಾಗಿರುವ ಹರ್ಷ ಅವರು ನಂತರ ಕಾನೂನು ವ್ಯಾಸಂಗ ನಡೆಸಿದರು. ದ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಕೆಲ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಹರ್ಷ ಅವರು ಸದ್ಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರ ಕೃತಿಯನ್ನು  ’ಮಾತಿಗೆ ಏನು ಕಡಿಮೆ’ ಎಂದು ಕನ್ನಡೀಕರಿಸಿದ್ದಾರೆ. ಮಾಂಗ್‌ ಗಾರುಡಿ ಸಮುದಾಯದ ಬಗ್ಗೆ ಸಂಶೋಧನಾತ್ಮಕ ಸಮಾಜ ಶಾಸ್ತ್ರೀಯ ಗ್ರಂಥ ಪ್ರಕಟಿಸಿದ್ದಾರೆ. ...

READ MORE

Related Books