ದಳವಾಯಿ

Author : ಲಿಂಗದಹಳ್ಳಿ ಹಾಲಪ್ಪ

Pages 144

₹ 100.00




Year of Publication: 2011
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ದಳವಾಯಿ ಎಂದಾಕ್ಷಣ ಸೇನಾಧಿಪತಿ, ಒಂದು ಪ್ರದೇಶದ ನಾಯಕ, ಮುಖ್ಯಸ್ಥ ಹೀಗೆ ಬೇರೆ ಬೇರೆ ಅರ್ಥಗಳು ಮೂಡಿಬರುತ್ತವೆ. ಆದರೆ ’ದಳವಾಯಿ’ ಕೃತಿಯು ಕುರುಬ ಸಮುದಾಯದ ಜೀವಂತ ಬೀರಪ್ಪನನ್ನು ಪರಿಚಯಿಸುತ್ತದೆ.

ದಳವಾಯಿ ಅರ್ಥ ಮತ್ತು ವ್ಯಾಖ್ಯಾನ, ಹಾಲುಮತ ಸಮುದಾಯದ ಇತಿಹಾಸ, ಕುರುಬರ ಕುಲದೈವ ಬೀರಪ್ಪ, ದಳವಾಯಿ ಕಟ್ಟ ಕಟ್ಟುವುದು, ದೀಕ್ಷೆ ಕೊಡುವುದು, ದಳವಾಯಿಯ ಕೌಟುಂಬಿಕ, ಸಾಮಾಜಿಕ ಧಾರ್ಮಿಕ ಜೀವನ ವಿಚಾರಗಳು, ಆಚರಣೆಗಳು, ಕುಣಿತ, ಆಧುನಿಕತೆಯಲ್ಲಿ ದಳವಾಯಿಯ ಸ್ಥಾನ- ಹೀಗೆ ಅನೇಕ ಮಗ್ಗುಲುಗಳಿಂದ ಕುರುಬರ ಜೀವಂತ ಬೀರಪ್ಪನ ಸಾಂಸ್ಕೃತಿಕ ಮಹತ್ವವನ್ನು ಲೇಖಕರು ಈ ಕೃತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ. 

About the Author

ಲಿಂಗದಹಳ್ಳಿ ಹಾಲಪ್ಪ
(03 February 1958)

ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್‌ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ.   ಕೃತಿಗಳು: ಹಾಲುಮತದ ಹಿರಿಮೆ ...

READ MORE

Related Books