ದ್ವೀಪದಲ್ಲಿ ಮಕ್ಕಳು

Author : ಮೋಹನ್ ವೆರ್ಣೇಕರ್
Buy Now


Year of Publication: 2013
Published by: ಕಾವ್ಯಕಲಾ ಪ್ರಕಾಶನ
Address: # 12873, 7ನೇ ಕ್ರಾಸ್, ಚಂದ್ರ‌ ಲೇಔಟ್ ವಿಜಯನಗರ, ಬೆಂಗಳೂರು-560040
Phone: 8694912860

Synopsys

ಲೇಖಕ ಮೋಹನ್‌ ವರ್ಣೀಕರ್‌ ಅವರ ಮಕ್ಕಳ ಸಾಹಿತ್ಯ ಕೃತಿ ʻದ್ವೀಪದಲ್ಲಿ ಮಕ್ಕಳುʼ (ಮಕ್ಕಳ ಸಾಹಸ ಪ್ರಧಾನ ಕಾದಂಬರಿ). ಒಂದು ನಿರ್ಜನ ದ್ವೀಪದಲ್ಲಿ ಎರಡು ದಿನಗಳಲ್ಲಿ ನಡೆಯುವ ಅನೇಕ ಕೌತುಕಭರಿತ ಘಟನೆಗಳನ್ನು ಒಟ್ಟುಮಾಡಿ ಲೇಖಕರು ಇಲ್ಲಿ ಕತೆ ಹೆಣೆದಿದ್ಧಾರೆ. ಕತೆ ಓದುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೂ ಓದುಗರ ಕುತೂಹಲವನ್ನು ಕೆರಳಿಸುತ್ತಾ ಸಾಗುವುದು ವೈಶಿಷ್ಟ್ಯವಾಗಿದೆ. ಜೊತೆಗೆ ಕತೆ ಇನ್ನಷ್ಟು ಅರ್ಥವಾಗಲು ರಘುಪತಿ ಶೃಂಗೇರಿಯವರು ಇಲ್ಲಿ ಸಂದರ್ಭಕ್ಕೆ ತಕ್ಕಹಾಗಿನ ಚಿತ್ರಗಳನ್ನು ರಚಿಸಿದ್ಧಾರೆ. ಹೀಗೆ ಮಕ್ಕಳಿಗೆ ಕತೆಯ ಮೂಲಕ ಮನರಂಜನೆ ನೀಡುವುದರ ಜೊತೆಗೆ ಅವರನ್ನು ಮಾನವೀಯ ಮೌಲ್ಯಗಳತ್ತ ಯೋಚಿಸುವಂತೆ ಈ ಕೃತಿ ಮಾಡುತ್ತದೆ.

About the Author

ಮೋಹನ್ ವೆರ್ಣೇಕರ್
(22 June 1950)

ಮೋಹನ್‌ ವರ್ಣೇಕರ್ ಅವರದ್ದು ಕಲೆ ಹಾಗೂ ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣದಲ್ಲಿ 1950 ಜೂನ್ 22ರಂದು ಜನಿಸಿದರು. ತಂದೆ ವಾಸುದೇವ ಶೇಟ್‌, ತಾಯಿ ತುಳಸಿಬಾಯಿ. ಬಿ.ಎ. ಪದವಿಯೊಂದಿಗೆ ಟೈಪಿಂಗ್‌ ಮತ್ತು ಶೀಘ್ರಲಿಪಿಯಲ್ಲಿ ರ್‍ಯಾಂಕ್‌ ಪಡೆದಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿಯಾಗಿ (RECORDING OFFICER) ಸೇವೆಗೈದು ಸ್ವಯಂ ನಿವೃತ್ತಿ. ಪ್ರಸ್ತುತ ಮೈಸೂರಿನಲ್ಲಿ ನೆಲೆ. ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ  ಅವರ ಪ್ರಮುಖ ಕತಾ ಸಂಕಲನಗಳು. ಅವರ ಮೊದಲ ಕಾದಂಬರಿ ‘ದಿಕ್ಕು’. ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ ಅವರ ಮತ್ತಿತರ ಕಾದಂಬರಿಗಳು. ...

READ MORE

Related Books