ಬಾವಲಿ ಗುಹೆ

Author : ತಮ್ಮಣ್ಣ ಬೀಗಾರ

Pages 76

₹ 70.00

Buy Now


Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿಯ ಸರಣಿಯಲ್ಲಿ ಹೊರಬಂದಿರುವ ಐದನೆಯ ಮಕ್ಕಳ ಕಾದಂಬರಿ ಇದು. ಹಳೆಯ ಮಾದರಿಯ ಜನಪದ ಕತೆಗಳು, ಪಂಚತಂತ್ರದ ಕತೆಗಳು, ನೀತಿಕತೆಗಳನ್ನು ಅನುಸರಿಸಿವೆ. ಅಕ್ರಮ ಗಣಿಗಾರಿಕೆಯಿಂದ ಪರಿಸರದ ಮೇಲೆ ಅಗುವ ತೊಂದರೆಯನ್ನು ಮಕ್ಕಳ ಕಣ್ಣಿನಿಂದ ಲೇಖಕರು ವಿವರಿಸಿದ್ದಾರೆ.

ಈ ಕಾದಂಬರಿಯಲ್ಲಿ ಪರಿಸರದ ಬಗ್ಗೆ ಮಕ್ಕಳಿಗಿರುವ ಕಾಳಜಿ, ಪರಿಸರ ರಕ್ಷಣೆ ಹೋರಾಟದಲ್ಲಿ ಮಕ್ಕಳ ಪಾತ್ರ, ತಾವೇ ಯಾವುದೋ ಹೊಳಹುಗಳನ್ನು ಕಂಡುಕೊಂಡು ಪತ್ತೇದಾರರಾಗಿ ಹುಡುಕುವ ರೀತಿ,  ಗಣಿಗಾರಿಕೆಯ ಬಗ್ಗೆ ಮಕ್ಕಳಿಗಿರುವ ಕುತೂಹಲವನ್ನು ಈ ಕಾದಂಬರಿಯು ವಿವರಿಸುತ್ತದೆ. ಶಂಕರ, ಜಾನು,ತೇಜು ಎಂಬ ಪುಟ್ಟ ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದ್ದು, ಶಾಲೆಯ ರಜಾದಿನಗಳಲ್ಲಿ ಆಟ ಆಡಲು ಕಾಡಿಗೆ ಹೋದಾಗ ಇವರು ಅಕ್ರಮ ಗಣಿಗಾರಿಕೆಗೆ ಸಾಕ್ಷಿಯಾದ ರೀತಿಯನ್ನು ಸ್ವಾರಸ್ಯಕರವಾದ ರೀತಿಯಲ್ಲಿ ವರ್ಣಿಸಲಾಗಿದೆ.

ಮಕ್ಕಳ ಓದು ಉಲ್ಲಸಿತವಾಗಬೇಕಾದರೆ,  ಅವರಿಗೆ ರುಚಿಸುವ ಸಾಹಿತ್ಯದ ಸ್ವಾರಸ್ಯಕರ ಕತೆಗಳು ಬೇಕು. ಹೊಸಗಾಲದ ಮಕ್ಕಳಿಗೆ ಹೊಸ ಹೊಸ ಓದು ಲಭ್ಯವಾಗಬೇಕು ಎಂಬ ಆಶಯದಿಂದ ಈ ರೀತಿ ಸರಣಿಯ ರೂಪದಲ್ಲಿ ಕಾದಂಬರಿಗಳನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. 

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Awards & Recognitions

Related Books