ನಾನೂ ಅಂಬೇಡ್ಕರ್

Author : ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

Pages 115

₹ 110.00




Year of Publication: 2018
Published by: ಶ್ರೀ ಅಮ್ಮ ಪ್ರಕಾಶನ
Address: ನಂ.5, ಶ್ರೀಕಂಠ ನಿಲಯ ಹೈಜೆನ್ ಅಕ್ವಾ ಲೇಔಟ್, 1ನೇ ಕ್ರಾಸ್, ಬೋಧನಹೊಸಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು, ಬೆಂಗಳೂರು- 560067
Phone: 9483081453

Synopsys

‘ನಾನೂ ಅಂಬೇಡ್ಕರ್’ ಹ. ಸ. ಬ್ಯಾಕೋಡ ಅವರು ಮಕ್ಕಳಿಗಾಗಿ ಬರೆದಿರುವ ಕಾದಂಬರಿ. ಈ ಕೃತಿಗೆ ಲೇಖಕ ಸಿ.ಎನ್. ರಾಮಚಂದ್ರನ್ ಬೆನ್ನುಡಿ ಬರೆದು ‘ಇದೊಂದು ಪ್ರಯೋಗಾತ್ಮಕ ಕೃತಿ. ಯಾವ ಜಾತಿ-ವರ್ಗ-ಧರ್ಮಕ್ಕೆ ಸೇರಿದ ಮಕ್ಕಳೇ ಆಗಲಿ, ಅವರಲ್ಲಿ ಅಂಬೇಡ್ಕರ್ ಅಥವಾ ಗಾಂಧಿ ಅಥವಾ ಇತರ ಮಹಾನುಭಾವರ ಪ್ರತಿಭೆ-ಗುಣಗಳು, ಆದರೆ ಅವುಗಳನ್ನು ಗುರುತಿಸಿ, ಅವುಗಳು ಫಲಪ್ರದವಾಗಿ ಬೆಳೆಯುವುದಕ್ಕೆ ಸಮಾಜದ ಇತರ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಸಹಾಯ- ಪ್ರೋತ್ಸಾಹಗಳು ಅವಶ್ಯಕ ಎನ್ನುವುದನ್ನು ಈ ಕೃತಿ ಓದುಗರಿಗೆ ಮನದಟ್ಟು ಮಾಡುತ್ತದೆ. ಜೊತೆಗೆ ಈ ಅಂಶವನ್ನೇ ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ, ಪ್ರಕೃತಿ ಹಾಗೂ ಪರಿಸರ (Nature-Environment), ಪ್ರಕೃತಿದತ್ತ ಪ್ರತಿಭೆ ಹಾಗೂ ಸಾಮಾಜಿಕ ಪರಿಸರ ಇವುಗಳು ಪರಸ್ಪರ ಪೋಷಕವಾಗಿದ್ದರೆ ಮಾತ್ರ ಮಹಾನ್ ಸಾಧಕರು ಸಮಾಜದಲ್ಲಿ ಮೂಡಿ ಬರಬಹುದು ಎಂಬುದು ಈ ಕೃತಿಯ ಆಶಯ. ಈ ಕೃತಿ ಬೆಳೆಯುವ ಮಕ್ಕಳಿಗೆ ಒಂದು ಆದರ್ಶ ಮಾದರಿಯನ್ನು ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲದೆ, ಪರೋಕ್ಷವಾಗಿ, ಬಡ ಹಾಗೂ ಕೆಳವರ್ಗದ ಮಕ್ಕಳನ್ನು ಉಪೇಕ್ಷಿಸದೆ ಅವರಿಗೂ ಅವಶ್ಯಕ ಸಹಾಯ-ಪ್ರೋತ್ಸಾಹಗಳನ್ನು ನೀಡುವಂತೆ ಸಮಾಜವನ್ನು ಪ್ರೇರೇಪಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 2020ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.

About the Author

ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

ಲೇಖಕ ಹ.ಸ. ಬ್ಯಾಕೋಡ ಮಕ್ಕಳ ಸಾಹಿತ್ಯಕ್ಕೆ ಅರ್ಥಪೂರ್ಣ ಸತ್ವವನ್ನು ತಂದುಕೊಟ್ಟ ಸಾಹಿತಿ. ಇವರು ಪ್ರಸಿದ್ಧ ಛಾಯಾಗ್ರಾಹಕರೂ ಹೌದು. ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಗೆ ಪಾತ್ರರಾಗಿರುವ ಬ್ಯಾಕೋಡ ಕರ್ನಾಟಕದ ಬಯಲುಸೀಮೆ ಪ್ರದೇಶದಲ್ಲಿ ಹುಟ್ಟಿ, ಕರಾವಳಿ ಪ್ರದೇಶದಲ್ಲಿ ಆಡಿ ಬೆಳೆದು, ಮಲೆನಾಡಿನ ಹಸಿರು ಪರಿಸರದ ಒಡನಾಟದಲ್ಲಿದ್ದವರು. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದಾರೆ. ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಪತ್ರಕರ್ತರೂ ಆಗಿರುವ ಬ್ಯಾಕೋಡ ಬಹುಮುಖ ಪ್ರತಿಭೆ. ಬಂಗಾರ, ರಜತ, ಕಂಚಿನ ಪದಕಗಳು, ಗೌರವ ಪ್ರಶಸ್ತಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ, ಹಾಂಗ್ ಕಾಂಗ್, ಮ್ಯಾಟ್ ಲ್ಯಾಂಡ್, ...

READ MORE

Related Books