ಹೈದರಾಬಾದಿನ ಮದರ್ಸ್ ಶಾಲೆಯಲ್ಲಿ ಎಲ್.ಕೆ.ಜಿ ಓದುತ್ತಿದ್ದ ನಾಲ್ಕೂವರೆ ವರ್ಷದ ಮಗು ಮೊದಲ ಬಾರಿ ಸೋಪಿನಿಂದ ಸ್ನಾನ ಮಾಡಿದ್ದು, ಅಮವಾಸ್ಯೆಯ ದಿನದಂದು ಹುಟ್ಟಿದ್ದು ಹೀಗೆ… ಮಗು ಇದನ್ನೆಲ್ಲಾ ನೆನಪಿಟ್ಟುಕೊಳ್ಳಲು ಸಾಧ್ಯವೇ ಎನ್ನುವಂತಹ ವಿಷಯಗಳನ್ನಿಟ್ಟುಕೊಂಡು ಕತೆ ಹೆಣೆದಿದ್ದಾರೆ ಗಣೇಶ್ ಪಿ. ನಾಡೋರ. ಮಕ್ಕಳಿಗಾಗಿ ಬರೆದ ಕಾದಂಬರಿಯ ಶೀರ್ಷಿಕೆ-ಆಟ. ಮಕ್ಕಳ ಕತೆ, ಕಾದಂಬರಿಗಳು ಎಂದರೆ ಪ್ರಾಣಿ, ಪಕ್ಞಿಗಳೇ ನಾಯಕರನ್ನಾಗಿಸುವುದು ಸಹಜ. ಆದರೆ, ಇಲ್ಲಿ ಕೇಕು, ಸ್ಕೂಲು, ಪೆನ್ಸಿಲ್ ಹೀಗೆ ದಿನಬಳಕೆಯ ವಸ್ತುಗಳೇ ಕತೆಗಳ ಪಾತ್ರಗಳಾಗಿ ಹೊರ ಹೊಮ್ಮಿರುವುದು ವಿಶೇಷ.
©2021 Bookbrahma.com, All Rights Reserved