ಎಲ್ಲಿ ಎಂದು ಹೇಳಿ

Author : ಗಾಯತ್ರಿ ಮೂರ್ತಿ

Pages 202

₹ 180.00




Year of Publication: 2015
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಮಕ್ಕಳಿಗಾಗಿ ವಿಜ್ಞಾನ ಬರಹಗಳನ್ನು ಬರೆಯುವ ಮೂಲಕ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವಲ್ಲಿ ಹತ್ಯು ಹಲವು ಕೃತಿಗಳನ್ನು ರಚಿಸಿದ ಲೇಖಕಿ ಗಾಯತ್ರಿ ಮೂರ್ತಿ ಅವರ ಮತ್ತೊಂದು ಕೃತಿ-ನಿಮಗಿದು ಗೊತ್ತೆ? ಎಲ್ಲಿ ಎಂದು ಹೇಳಿ. ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಕೆರಳಿಸುವ ಕೃತಿ ಇದು. ಕೇವಲ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಈ ಮನೋಭಾವದ ಅಗತ್ಯವನ್ನು ಹಾಗೂ ಸುತ್ತಮುತ್ತಲಿನ ಸಣ್ಣ ಸಣ್ಣ ವಿಷಯಗಳನ್ನು ವೈಜ್ಞಾನಿಕವಾಗಿ ತಿಳಿಯುವಲ್ಲಿ ಈ ಕೃತಿಯು ಅತ್ಯಂತ ಉಪಯುಕ್ತವಾಗಿದೆ. ಮಕ್ಕಳ ಕುತೂಹಲಕಾರಿ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಇಲ್ಲಿಯ ಬರಹಗಳ ವಿವರಣೆಯು ಅತ್ಯಂತ ಸರಳವೂ, ಸುಲಭವೂ ಇದೆ. ಇಂತಹ ಸಾಮಾನ್ಯ ಹಾಗೂ ಸಣ್ಣ ಪ್ರಶ್ನೆಗಳು ನಮಗೆ ನೀಡುವ ಅಗಾಧ ಜ್ಞಾನ ಭಂಡಾರವಾಗಿ ಈ ಕೃತಿ ಇದೆ.

About the Author

ಗಾಯತ್ರಿ ಮೂರ್ತಿ
(04 April 1948)

ಕಾದಂಬರಿಗಾರ್ತಿ ಗಾಯತ್ರಿ ಮೂರ್ತಿ ಅವರು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1948 ಏಪ್ರಿಲ್ 04 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೆ. ರಾಮಸ್ವಾಮಿ, ತಾಯಿ ಇಂದುಮತಿ. ದೋಣಿ ಸಾಗಲಿ ತೀರಕೆ, ಅಂಜದಿರು ಮನವೇ, ಹಂಬಲ (ಕಾದಂಬರಿ), ಬಿಂದು, ಸಿಂಧು ಮತ್ತು ಬೂಸ್ಸಿ, ಕಾಡಿನಲ್ಲೊಂದು ಕ್ಯಾಂಪು (ಮಕ್ಕಳ ಕಾದಂಬರಿ), ನಕ್ಷತ್ರಗಳು (ಕಾವ್ಯ), ಕೋಸಂಬರಿ (ಹಾಸ್ಯ ಸಾಹಿತ್ಯ), ಕೋಸಂಬರಿ ಹಾಸ್ಯಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಸಂದಿದೆ. ...

READ MORE

Related Books