ಪ್ರಾಚೀನ ಭಾರತದಲ್ಲಿ ರಸಾಯನ ವಿಜ್ಞಾನ

Author : ಕೈವಾರ ಗೋಪಿನಾಥ್‌

Pages 192

₹ 100.00




Year of Publication: 2009
Published by: ರಾಷ್ಟ್ರೋತ್ತಾನ ಪ್ರಕಾಶನ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು - 560019
Phone: 08026612730

Synopsys

ರಸಾಯನ ವಿಭಾಗದಲ್ಲಿ ವಿಜ್ಞಾನ ಬೆಳೆಯಲು ನಮ್ಮ ಭಾರತೀಯ ವಿಜ್ಞಾನಿಗಳು ನೀಡಿದ ಕೊಡುಗೆಯೂ ಕಡಿಮೆಯೇನಲ್ಲ. ಅವರ ಕಾಣಿಕೆಯನ್ನು ಸ್ಥೂಲವಾಗಿ ಅರಿತುಕೊಳ್ಳುವ ಪುಸ್ತಕ ಇದಾಗಿದೆ. ಪ್ರಾಚೀನ ಭಾರತದ ರಸಾಯನ ವಿಜ್ಞಾನದಲ್ಲಿ ಗಂಧಕ, ಪಾದರಸ ಮೊದಲಾದವನ್ನು- ಕೆಲವೊಮ್ಮೆ ಸಸ್ಯಸಂಯೋಗದಿಂದ – ಸಂಕೀರ್ಣ ಪ್ರಕ್ರಿಯೆಗೊಳಪಡಿಸಿ ವೈದ್ಯಶಾಸ್ತ್ರದಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಲೋಹಕುಶಲಕರ್ಮಿಗಳು ಕಬ್ಬಿಣ ಮಾತ್ರವಲ್ಲದೆ ಉಕ್ಕು ಮೊದಲಾದ ಮಿಶ್ರಲೋಹಗಳ ತಯಾರಿಕೆಯಲ್ಲಿ ಅತಿಶಯ ಪರಿಣತಿ ಸಾಧಿಸಿದ್ದರು. ತಾಮ್ರ ಮತ್ತು ತವರದ ಮಿಶ್ರಣವಾದ ಕಂಚಿನ ತಯಾರಿಕೆ 1200 ವರ್ಷಗಳ ಹಿಂದೆಯೆ ಭಾರತೀಯರಿಗೆ ಕರಗತವಾಗಿತ್ತು. ತಾಮ್ರ ಮತ್ತು ಸತುವಿನ ಮಿಶ್ರಣವಾದ ಹಿತ್ತಾಳೆ ವಿಶ್ವದಲ್ಲಿಯೆ ಮೊದಲು ತಯಾರಾದದ್ದು ಭಾರತದಲ್ಲಿ. ರಸಾಯನ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಪ್ರಾಚೀನ ಕಾಲದ ಹಾಗೂ ಮಧ್ಯಯುಗದ ಭಾರತದ ಸಾಧನೆಯ ಸಂಕ್ಷಿಪ್ತ ಅವಲೋಕನ ಈ ಕೃತಿಯಾಗಿದೆ.

About the Author

ಕೈವಾರ ಗೋಪಿನಾಥ್‌

ವೈಜ್ಞಾನಿಕ ಲೇಖಕ ಎಂದೇ ಖ್ಯಾತಿ ಪಡೆದ ಕೈವಾರ ಗೋಪಿನಾಥ್‌ ಹುಟ್ಟಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ. ಜನನ  1943 ಏಪ್ರಿಲ್‌ 23ರಂದು. ತಂದೆ ಕೈವಾರ ರಾಜಾರಾಯರು, ತಾಯಿ ಕಮಲಾಬಾಯಿ. ಕಲೆಯ ವಾತಾವರಣದಲ್ಲಿ ಬೆಳೆದುಬಂದ ಗೋಪಿನಾಥ್ ಅವರಿಗೂ ಬಾಲ್ಯದಿಂದಲೂ ಸಾಹಿತ್ಯದಲ್ಲಿ ನಂಟು ಬೆಳೆದಿತ್ತು. ನಂತರ ವಿಜ್ಞಾನಕ್ಷೇತ್ರದ ಬರವಣಿಗೆ ಪ್ರಾರಂಭಿಸಿದರು. ಅವರ ವೈಜ್ಞಾನಿಕ ಬಿಡಿ ಬರೆಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಕೋಲಾರ ಪತ್ರಿಕೆ ಮುಂತಾದ ದಿನ ಪತ್ರಿಕೆ, ಹಾಗೂ ಸುಧಾ, ತರಂಗ, ಕರ್ಮವೀರ, ಪ್ರಜಾಮತ ಹೊಸತು, ತುಷಾರ, ಉತ್ಥಾನ ಮುಂತಾದ ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಚಾರ್ಲ್ಸ್ ಡಾರ್ವಿನ್‌, ...

READ MORE

Related Books