ಫಿಜಿಕ್ಸ್ ಮತ್ತು ಐನ್ ಸ್ಟೈನ್

Author : ಅಡ್ಯನಡ್ಕ ಕೃಷ್ಣಭಟ್

Pages 132

₹ 77.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/01/02

Synopsys

ಲೇಖಕ ಅಡ್ಯನಡ್ಕ ಕೃಷ್ಣಭಟ್ ಅವರ ಕೃತಿ- ‘ಫಿಸಿಕ್ಸ್ ಮತ್ತು ಐನ್‌ಸ್ಟೈನ್’. ಮನುಷ್ಯನ ಅನುಭವಕ್ಕೆ ಬರುವ ಅನಂತ ವೈವಿಧ್ಯದ ತಿಳಿವಿಗಾಗಿ ನಡೆಸಿದ ಹುಡುಕಾಟದಿಂದ ಫಿಸಿಕ್ಸ್ ಅಥವಾ ಭೌತವಿಜ್ಞಾನ ಎಂಬ ಅಧ್ಯಯನ ರೀತಿ ಬೆಳೆದದ್ದು - ಜರ್ಮನಿಯಲ್ಲಿ ಹುಟ್ಟಿ ಅಮೆರಿಕದಲ್ಲಿ ಮರೆಯಾದ ಐನ್‌ಸ್ಟೈನ್, ಜಗತ್ತಿನಲ್ಲಿ ಎಲ್ಲರಿಗೂ ತಮ್ಮವನೆನಿಸುವಂತೆ ಸಾಗಿದ ಜೀವನರೇಖೆ - ಬಾಲ್ಯ, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಭಾವ, ಸ್ವಾತಂತ್ರ್ಯ, ದೇವರು, ಧರ್ಮ, ರಾಜಕೀಯ, ವಿಜ್ಞಾನಗಳನ್ನು ಶ್ರೇಷ್ಠ ವಿಜ್ಞಾನಿಯೊಬ್ಬ ಕಂಡ ಬಗೆ. ಫಿಸಿಕ್ಸ್ ಇಷ್ಟವಾದವರಿಗೆ ಕಷ್ಟವಾಗದಿರಲು ಸಾಗಬೇಕಾದ ದಾರಿ - ಇವೆಲ್ಲ ಈ ಕೃತಿಯಲ್ಲಿ ತುಂಬಿವೆ. ಗಣಿತದ ಸೂತ್ರಗಳಿಲ್ಲ, ಪಠ್ಯಗಳ ಬಿಗಿ ಬಂಧವಿಲ್ಲ, ಇರುವುದಕ್ಕಿಂತ ಹೆಚ್ಚನ್ನು ಹೇಳಬಲ್ಲ ಚಿತ್ರಗಳಿವೆ.

About the Author

ಅಡ್ಯನಡ್ಕ ಕೃಷ್ಣಭಟ್
(15 March 1938)

ಅಡ್ಯನಡ್ಕ ಕೃಷ್ಣಭಟ್ ಅವರು ಮಂಗಳೂರು ಬಳಿಯ ಅಡ್ಯನಡ್ಕದಲ್ಲಿ ಜನಿಸಿದರು. ಅವರು ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಪ್ರಸ್ತುತ ನಿವೃತ್ತಿ ಹೊಂದಿ ಮೈಸೂರಿನಲ್ಲಿ ನೆಲೆಸಿದ್ದಾರೆ. ವಿಜ್ಞಾನ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು. ಅವರ ಪ್ರಥಮ ಕೃತಿ ‘ಗಗನಯುಗ' 1964ರಲ್ಲಿ ಪ್ರಕಟವಾಯಿತು. 1966ರಲ್ಲಿ ವಿಜ್ಞಾನ ಪತ್ರಿಕೆ ವಿಜ್ಞಾನ ಲೋಕ'ದ ಸಂಪಾದಕರಾಗಿ ಬರವಣಿಗೆ ಶುರು ಮಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚಟುವಟಿಕೆಯಲ್ಲಿಯೂ ಭಾಗಿಯಾದ್ದಾರೆ, ಸುಮಾರು 20ಕೃತಿಗಳನ್ನು ರಚಿಸಿದ್ದು, 'ಬಾಲ ವಿಜ್ಞಾನ', ‘ಕಿಶೋರ ವಿಜ್ಞಾನ’ನ ಪತ್ರಿಕೆಗಳ ಪ್ರಧಾನ ಸಂಪಾದಕರು ಆಗಿದ್ದರು. 1977ರಲ್ಲಿ 'ಸುದರ್ಶನ' ಡಾ. ಟಿ.ಎಂ.ಎ. ಪೈ ಅವರ ಅಭಿನಂದನ ಗ್ರಂಥ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ...

READ MORE

Related Books