ವಿಜ್ಞಾನ ಸಪ್ತರ್ಷಿಗಳು

Author : ಜಿ.ಟಿ. ನಾರಾಯಣರಾವ್

Pages 218

₹ 35.00




Year of Publication: 2001
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

ವಿಜ್ಞಾನ ವಿಷಯಗಳಲ್ಲಿ ಆಸಕ್ತರೂ ಕನಿಷ್ಟ ಪಕ್ಷ ಪ್ರೌಢಶಾಲೆಯ ವಿಜ್ಞಾನ ಶಿಕ್ಷಣ ಪಡೆದವರೂ ಆಗಿರುವ ಓದುಗರನ್ನು ಲಕ್ಷದಲ್ಲಿಟ್ಟುಕೊಂಡು ಈ ಲೇಖನಗಳನ್ನು ಬರೆಯಲಾಗಿದೆ.

ಆದ್ದರಿಂದ ಸರಳವಾಗಿ ಗ್ರಹಿಸಿ ಸುಲಭವಾಗಿ ಇಲ್ಲಿಯವನ್ನು ತಿಳಿದುಕೊಳ್ಳಬಹುದು. ಈ ಕೃತಿಯು ಆಕಾಶದ ಕುತೂಹಲಗಳಲ್ಲೊಂದಾದ ಸಪ್ತರ್ಷಿಗಳೆಂಬ ನಕ್ಷತ್ರಗಳ ಬಗ್ಗೆ ಬೆಳಕುಚೆಲ್ಲುತ್ತದೆ. ಆ ನಕ್ಷತ್ರಗಳಿಗೆ ಸಪ್ತರ್ಸಿಗಳೆಂಬ ಹೆಸರು ಬರಲು ಕಾರಣಗಳಿಂದ ಹಿಡಿದು ಅದನ್ನು ಪತ್ತೆಹಚ್ಚಿದವರ ಕುರಿತಾದ ಮಾಹಿತಿಯನ್ನೂ ಈ ಕೃತಿ ನೀಡುತ್ತದೆ.

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books