ಕಾಲಯಾನ

Author : ಸದ್ಯೋಜಾತ ಭಟ್ಟ

Pages 192

₹ 170.00




Year of Publication: 2019
Published by: ಸಮನ್ವಿತ ಪ್ರಕಾಶನ
Phone: 9844192952

Synopsys

ಬ್ರಹ್ಮಾಂಡ ರಚನೆ ಕುರಿತು ಹಲವಾರು ಸಿದ್ಧಾಂತಗಳಿವೆ. ಕೆಲವು ತರ್ಕಕ್ಕೆ ನಿಲುಕದ್ದು ಅನ್ನುವ ಒಂದೇ ಕಾರಣಕ್ಕೆ ಧಿಕ್ಕರಿಸಿದ್ದೂ ಇದೆ. ‘ತರ್ಕಕ್ಕೆ ನಿಲುಕಲಿಲ್ಲ ಸತ್ಯ.’ ಆದರೆ ‘ನನ್ನ ತರ್ಕಕ್ಕೆ ನಿಲುಕಲಿಲ್ಲ,’ ಇದು ಮೀರಿದ ಸತ್ಯವಾ? ಜ್ಞಾನ, ವಿಜ್ಞಾನ, ಅಜ್ಞಾನ ಅನಿಸಿದ್ದರೆ ಅದರಲ್ಲಿ ನನ್ನ ಮೌಢ್ಯದ್ದೂ ಪಾಲಿರಬಹುದಾ? ಎಂಬ ಪ್ರಶ್ನೆಗಳನ್ನು ಈ ಪುಸ್ತಕ ಕೆದಕುತ್ತದೆ.

ಆದಿಯಲ್ಲಿದ್ದದ್ದು ನೀರು, ಮೊದಲ ಜೀವ ಸಸ್ಯ, ಪಾಚಿ ರೂಪದಲ್ಲಾಯಿತು.. ನಂತರ ಭೂಮಿ, ತದನಂತರ ಮಿಕ್ಕೆಲ್ಲವೂ ಬದುಕಿನ ಅವಶ್ಯಕತೆಗೆ ಬೇಕಾದ್ದೆಲ್ಲ ಉಂಟಾದ ನಂತರ ಮನುಷ್ಯ. ಉದ್ದಕ್ಕೂ ಸೂರ್ಯನ ಸಹಕಾರ, ಕಾವಿಲ್ಲದೆ ಜೀವವಿಲ್ಲ, ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತ ಹೋಗಿ, ಕೊನೆಗೆ ಜೀವಗಳೇ ಇಲ್ಲದಾಗುವುದು ಪ್ರಳಯ. ಮತ್ತೆ ಮಳೆ. ಎಲ್ಲ ಕಡೆ ನೀರು, ಇದರ ಪುನರಾವರ್ತನೆ ? ಮತ್ತೆ ಸಸ್ಯ, ಪಾಚಿ ರೂಪದಲ್ಲಿ, ಇದು ವಿಜ್ಞಾನ ಪ್ರತಿಪಾದಿಸಿದ ಸತ್ಯ. ಇದು ಒಂದು ಕಲ್ಪನೆ ಅಂತ ಯಾವುದೋ ಕಾಲದಲ್ಲಿ ಗುರುತಿಸಿದ್ದರು ಅಂತನ್ನುವುದು ಈ ಮಣ್ಣಿನ ಜ್ಞಾನ ಎಂಬುದಕ್ಕೆ ವಿವರಗಳನ್ನು ನೀಡುತ್ತಾರೆ ಲೇಖಕರು.

About the Author

ಸದ್ಯೋಜಾತ ಭಟ್ಟ

ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...

READ MORE

Related Books