ನಿಮಗಿದು ಗೊತ್ತೇ? ಏನು ಎಂದು ಹೇಳಿ

Author : ಬೆ.ಗೋ. ರಮೇಶ್

Pages 200

₹ 200.00




Year of Publication: 2015
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಬೆ.ಗೋ. ರಮೇಶ್ ಅವರು ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬೆಳೆಸುವ ಉದ್ದೇಶದೊಂದಿಗೆ ಇಂಗ್ಲಿಷಿನಲ್ಲಿರುವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇ -ನಿಮಗಿದು ಗೊತ್ತೇ? ಏನು ಎಂದು ಹೇಳಿ. ಮಕ್ಕಳ ಸಣ್ಣ ಸಣ್ಣ ಪ್ರಶ್ನೆಗಳು ವೈಜ್ಞಾನಿಕವಾಗಿ ಬಹುದೊಡ್ಡ ಸವಾಲಾಗಿ ಪರಿಗಣಿಸಿ, ಹತ್ತು ಹಲವು ವಿಜ್ಞಾಣದ ಚಟುವಟಿಕೆಗಳಿಗೆ, ಸಿದ್ಧಾಂತಗಳಿಗೆ ಮೂಲ ಕಾರಣವಾಗುತ್ತವೆ ಎಂಬುದನ್ನು ತಿಳಿಸುವ ಕೃತಿ ಇದು. ತಮ್ಮ ಸುತ್ತಮುತ್ತಲಿರುವ ಸಣ್ಣ ಸಣ್ಣ ವಿಷಯಗಳು ಸಹ ಹೇಗೆ ವಿಜ್ಞಾನದ ವಿಷಯ ವಸ್ತುವಾಗುತ್ತವೆ ಎಂಬುದರ ಸೂಕ್ಷ್ಮತೆಯನ್ನೂ ಈ ಕೃತಿ ತಿಳಿಸುತ್ತದೆ. ಒಂದು ವೇಳೆ ತಿಳಿಯದಿದ್ದರೆ, ಪ್ರಶ್ನೆ ಮಾಡುವ ಮನೋಭಾವವನ್ನೂ ಸಹ ಈ ಕೃತಿಯು ಮಕ್ಕಳಲ್ಲಿ ಹುಟ್ಟುಹಾಕುತ್ತದೆ.

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books