ಪಂಜೆ ಮಂಗೇಶರಾಯರು ಮಕ್ಕಳ ಸಾಹಿತ್ಯದ ಆದ್ಯ ಪುರುಷರು. ಅವರು ಮಕ್ಕಳ ಕಥೆಗಳನ್ನು ರಚಿಸಿ ಸರಿಸುಮಾರು ನೂರು ವರ್ಷಗಳಾಗಿದ್ದರೂ ಇಂದಿಗೂ ಅವುಗಳ ತಾಜಾತನ ಮಾಸಿಲ್ಲ. ಕನ್ನಡದಲ್ಲಿ ಮಕ್ಕಳ ಪದ್ಯಗಳನ್ನು ಬರೆಯಲು ಯಾರೂ ಸಾಹಸ ಮಾಡದೇ ಇದ್ದಾಗ, ಪಂಜೆಯವರು ಆ ಕೆಲಸದಲ್ಲಿ ತೊಡಗಿ ಯಶಸ್ವಿಯಾದರು. ಅವರ ಮಕ್ಕಳ ಕಥೆಗಳು ಅನೇಕ ವರ್ಷಗಳ ಕಾಲ ಮಕ್ಕಳ ಪಠ್ಯದಲ್ಲಿ ಸೇರಿದ್ದವು. ಹಿಂದಿನ ತಲೆಮಾರಿನವರಂತೂ ಪಂಜೆಯವರ ಕಥೆಗಳನ್ನು ಓದಿಕೊಂಡೇ ಬೆಳೆದವರು.
ಪಂಜೆಯವರೀಗ ನಿಧಾನವಾಗಿ ಜನರ ವಿಸ್ಕೃತಿಗೆ ಒಳಗಾಗಿದ್ದಾರೆ. ಜನರು ನಿಧಾನವಾಗಿ ಅವರನ್ನು ಮರೆಯಲು ತೊಡಗಿದ್ದಾರೆ. ಹಾಗೆ ಆಗಬಾರದೆಂಬುದೇ ಪ್ರಕಾಶಕರ ಆಶಯ. ಅದೇ ಕಾರಕ್ಕಾಗಿ ಪಂಜೆಯವರ ಮಕ್ಕಳ ಪದ್ಯಗಳು ಮತ್ತು ಮಕ್ಕಳ ಕಥೆಗಳನ್ನು ಅಂಕಿತ ಪ್ರಕಾಶನ ಮರುಮುದ್ರಣ ಮಾಡಿದೆ. ಪಂಜೆಯವರು ಮತ್ತಷ್ಟು ಕಾಲ ಜನರ ಮನಸ್ಸಿನಲ್ಲಿ ಉಳಿಯಬೇಕೆಂಬುದು ಈ ಕೃತಿಯ ಆಶಯ.
©2021 Bookbrahma.com, All Rights Reserved