ಮೂಲ ವಿಜ್ಞಾನ: ಭಿನ್ನವಾಗಿ ಯೋಚಿಸಿ

Author : ಡಿ.ಆರ್. ಬಳೂರಗಿ

Pages 94

₹ 90.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸ್ಟೋರ್‍ಸ್‌ ಬಸ್‌ ಸ್ಟಾಪ್‌ ಹತ್ತಿರ, ಬೆಂಗಳೂರು.
Phone: 9480686862

Synopsys

'Think Differently' ಈ ನುಡಿಗಟ್ಟನ್ನು ಕೇಳಿರುವವರು, ಪ್ರಯೋಗಿಸಿರುವವರು ತುಂಬಾ ಜನರಿದ್ದಾರೆ. ಲೇಖಕರಾದ ಬಳೂರಗಿ ಅವರು ಭಿನ್ನವಾಗಿ ಯೋಚಿಸಿ ಪುಸ್ತಕದ ಶೀರ್ಷಿಕೆಯ ಮೂಲಕ ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಪಡಿಸಲು ಪ್ರಯತ್ನಿಸಿದ್ದಾರೆ. ವಿಭಿನ್ನ ಚಿಂತನೆಗಳ ಮೂಲಕ ಮೂಲ ವಿಜ್ಞಾನದ ಪರಿಕಲ್ಪನೆಗಳನ್ನು ಓದುಗರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಹೊಸ ಪ್ರಯತ್ನ ಈ ಕೃತಿಯಾಗಿದೆ. 

About the Author

ಡಿ.ಆರ್. ಬಳೂರಗಿ
(20 July 1943)

"ಸುಗ್ಗಿಯು ಬಂದಿತು ಹಿಗ್ಗನು ತಂದಿತು  ನಮ್ಮಯ ನಾಡಿನ ಜನಕೆಲ್ಲ" ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯದ ಕತೃ ದ.ರಾ ಬಳೂರಗಿ (ಡಿ.ಆರ್‌. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು.  ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ...

READ MORE

Related Books