ಹೇಗೆ ಬೇಕೋ ಹಾಗೆ

Author : ಕೆ.ವಿ. ಅಕ್ಷರ

Pages 88

₹ 70.00




Year of Publication: 2014
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ನಾಟಕದ ಕಥೆಯನ್ನು ಅಚಾನಕದ ಸರಣಿಗಳಾಗಿ ಕಟ್ಟುವ ಮೂಲಕ ಮತ್ತು ಸಂರಚನೆಯನ್ನು ಸಂಘರ್ಷಗಳ ಉತ್ತುಂಗವಿಲ್ಲದೆ ಸಡಿಲವಾಗಿ ಕಟ್ಟುವ ಮೂಲಕ ಶೇಕ್‌ಸ್ಪಿಯರ್ ಮತ್ತೇನನ್ನೋ ಮಾಡಲು ಹೊರಟಿದ್ದಾನೆಂದು ಕಾಣುತ್ತದೆ -- ಈ ಬದುಕನ್ನು `ಹೇಗೆ ಬೇಕೋ ಹಾಗೆ' ಹರಿಯಬಿಟ್ಟರೆ ಅದು ದಿಕ್ಕಾಪಾಲಾಗಿ ಚದುರುತ್ತದೆ; ಅಥವಾ ನಮ್ಮದೇ ಸ್ವಾರ್ಥಗಳ ನೇರಕ್ಕೆ ನಡೆಸಲು ಬಯಸಿದರೂ `ಹೇಗೆ ಬೇಕೋ ಹಾಗೆ' ಪ್ರತಿಕೂಲವಾಗಿ ಪಲ್ಲಟಗೊಳ್ಳುತ್ತದೆ. ಉದಾಹರಣೆಗೆ, ಈ ನಾಟಕದ ಹಿರಿಯ ಕಿರಿಯ ಡ್ಯೂಕರಿಬ್ಬರು ಮತ್ತು ಆಲಿವರ್ ಆರ್ಲಾಂಡೋ ಸಹೋದರರು ಇಂಥ ಸ್ವಾರ್ಥದ ಪ್ರಯೋಗದಿಂದಲೇ ಸ್ವಯಂಕೃತ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ನಾಯಕಿ ರೋಸಾಲಿಂಡ್‌ಗೆ ಮಾತ್ರ ಹೊಸ ಬಗೆಯ ಹೊಳಹು ದಕ್ಕಿದೆ -- ಆಕೆ ಈ ಬದುಕನ್ನು ಆಟವೆಂದು ಪರಿಭಾವಿಸಲು ಸಿದ್ಧಳಾಗಿದ್ದಾಳೆ; ಮತ್ತು ಪೂರ್ಣ ಮನಸ್ಸಿನಿಂದ ಈ ಆಟವನ್ನು ಯೋಜಿಸಿ ಆಡುತ್ತಹೋಗುವ ಮೂಲಕವೇ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಸ್ಥೆ ರ್ಯ ತೋರಿಸುತ್ತಾಳೆ. ದೇಶಾಂತರದ ಮತ್ತು ವೇಷಾಂತರದ ಆಟ ಕಟ್ಟುವ ಆಕೆ, ಅಂಥ `ನಾಟಕ'ದ ಮೂಲಕವೇ ಎಲ್ಲರ `ಬದುಕ'ನ್ನೂ `ಹೇಗೆ ಬೇಕೋ ಹಾಗೆ' ಹಾದಿಗೆ ತರಲು ಯಶಸ್ವಿ ಆಗುತ್ತಾಳೆ. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books