ಸಮ್ಮುಖದಲ್ಲಿ ಸ್ವಗತ

Author : ಕೆ.ವಿ. ಅಕ್ಷರ

Pages 164

₹ 115.00




Year of Publication: 2013
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಇಂಗ್ಲೀಷ್ ಲೇಖಕ ಇ. ಎಮ್. ಫಾರ್‌ಸ್ಟರ್ ಹೇಳಿದ ಒಂದು ಮಾತು ನೆನಪಾಗುತ್ತದೆ- 'ಓನ್ಲೀ ಕನೆಕ್ಟ್'. ಸಂಬಂಧವಿದೆ ಎಂದು ನಾವು ತಿಳಿಯದೇ ಇರುವ ವಿದ್ಯಮಾನಗಳಲ್ಲಿ, ಥಟ್ಟನೆ ಒಂದು ಸಂಬನ್ಧವನ್ನು ಕಾಣಿಸುವುದು ಜಾಣತನ ಮಾತ್ರವಲ್ಲ; ಅದೊಂದು ನೋಡುವ ಕ್ರಮ. ಅಕ್ಷರನ 'ಸ್ವಗತ'ದ ಹಲವೆಡೆ ಈ ಗುಣವನ್ನು ಕಂಡಿದ್ದೇನೆ... ಇಲ್ಲಿ ಸ್ವಾರಸ್ಯವಿಲ್ಲದ ಯಾವ ಲೇಖನವೂ ಇಲ್ಲ... ಕನ್ನಡ ಸಾಹಿತ್ಯಲೋಕಕ್ಕೆ ಈ ಕಾಲದಲ್ಲಿ ಪ್ರವೇಶಿಸಿರುವ ಗಟ್ಟಿಗರಲ್ಲಿ ಅಕ್ಷರ ಒಬ್ಬರು ಎಂಬುದನ್ನು ಅವರ ನಾಟಕಗಳಲ್ಲಿ, ನಾಟಕದ ಪ್ರಯೋಗಗಳಲ್ಲಿ, ನಾಟಕದ ಬಗ್ಗೆ ಅವರು ಬರೆದ ಗ್ರಂಥಗಳಲ್ಲಿ ಕಂಡಿರುವ ನನಗೆ, ಈ ಲೇಖನಗಳಲ್ಲಿನ ಸಮಕಾಲೀನವಾದ ಅವರ ಚಿಂತನಶೀಲ ಗುಣವನ್ನು ಕಂಡು ಕನ್ನಡದ ಭವಿಷ್ಯದ ಬಗ್ಗೆ ಭರವಸೆ ಮೂಡಿದೆ... - ಯು. ಆರ್. ಅನಂತಮೂರ್ತಿ

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books