ನಂದಿಕೇಶ್ವರನ ಅಭಿನಯ ದರ್ಪಣ

Author : ಎಂ.ಎ. ಹೆಗಡೆ

Pages 180

₹ 130.00




Year of Publication: 2014
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ನೃತ್ಯಕಲೆಗೆ ಮೀಸಲಾದ ಗ್ರಂಥಗಳಲ್ಲಿ ಅಭಿನಯದರ್ಪಣವು ಪ್ರಮುಖವಾದುದು; ತುಂಬ ಜನಪ್ರಿಯವಾದುದೂ ಹೌದು. ಈ ಕೃತಿಯು ಭರತನ ನಾಟ್ಯಶಾಸ್ತ್ರವೂ ಸೇರಿದಂತೆ ಅದುವರೆಗೆ ಬಂದಿರುವ ನಾಟ್ಯಮೀಮಾಂಸೆಯ ಗ್ರಂಥಗಳ ಸಾರವನ್ನು ಒಳಗೊಳ್ಳುತ್ತದೆ; ಜತೆಗೆ, ನಾಟ್ಯಶಾಸ್ತ್ರ ಇತ್ಯಾದಿಯಾಗಿ ಯಾವ ಗ್ರಂಥಗಳಲ್ಲಿಯೂ ದೊರೆಯದ ಅನೇಕ ಸಂಗತಿಗಳನ್ನು ಪ್ರಸ್ತಾಪಿಸುತ್ತದೆ. ಅಭಿನಯದರ್ಪಣದ ಪ್ರಧಾನವಾದ ಲಕ್ಷ್ಯವು ಹಸ್ತಾಭಿನಯದ ಕಡೆಗೆ. ನಾಟ್ಯಶಾಸ್ತ್ರಕಾರರ ಪ್ರಕಾರ ಜಗತ್ತಿನಲ್ಲಿರುವ ಎಲ್ಲ ಭಾವಗಳನ್ನೂ ವಸ್ತುಗಳನ್ನೂ ಹಸ್ತದ ಮೂಲಕ ಸೂಚಿಸಲು ಸಾಧ್ಯ. ಅದು ಸ್ಪಷ್ಟವಾದ ಆಕಾರವನ್ನು ಹೊಂದಿದ ಮೂರ್ತವಸ್ತುವೇ ಆಗಲಿ, ಅಂಥ ಆಕಾರವಿಲ್ಲದ ಅಮೂರ್ತವಸ್ತುವೇ ಆಗಲಿ, ಜಡವೇ ಆಗಲಿ, ಚೇತನವೇ ಆಗಲಿ ಹಸ್ತದ ಮೂಲಕ ಸೂಚಿಸಲು ಸಾಧ್ಯವೆಂಬ ನಿಲುಮೆ ಇವರದು. ಅದಕ್ಕಾಗಿ ಅಲ್ಲಿ ಹಸ್ತಾಭಿನಯವನ್ನು ವಿಪುಲವಾಗಿ ಬೆಳೆಸಲಾಗಿದೆ; ಭಾಷೆಯು ಮಾಡುವ ಕೆಲಸವನ್ನೆಲ್ಲ ಹಸ್ತಾಭಿನಯವೂ ಮಾಡಬಲ್ಲುದೆಂದು ಆ ಅಭಿನಯಕ್ರಮ ನಂಬುತ್ತದೆ. ಇಂಥ ಹಸ್ತಮುದ್ರೆಗಳನ್ನು ಕುರಿತಂತೆ ಮತ್ತು ಚಾರೀ, ಮಂಡಲ ಮೊದಲಾದ ಅಭಿನಯ ತಂತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ನಾಟ್ಯ-ನೃತ್ಯ ಪರಂಪರೆಯಲ್ಲಿ ಬಂದಿರುವ ಪ್ರಮುಖ ಆಕರ ಗ್ರಂಥ - ಅಭಿನಯದರ್ಪಣ. ಭಾರತದ ಹಲವು ಸಾಂಪ್ರದಾಯಿಕ ನಾಟ್ಯ ಮತ್ತು ನೃತ್ಯ ಪ್ರಕಾರಗಳಲ್ಲಿ ಇವತ್ತಿಗೂ ಪಠ್ಯಪುಸ್ತಕವೆಂಬಂತೆ ಬಳಕೆಯಾಗುವ ಗ್ರಂಥ ಇದು. ಈ ಪ್ರಮುಖ ಆಕರ-ಪಠ್ಯವನ್ನು ಇಲ್ಲಿ ಮೂಲ ಶ್ಲೋಕಗಳ ಸಮೇತ ಹೊಸ ಕನ್ನಡ ಅನುವಾದದಲ್ಲಿ ಪ್ರಸ್ತುತಪಡಿಸಲಾಗಿದೆ; ವಿವರವಾದ ಪ್ರಸ್ತಾವನೆ, ಟಿಪ್ಪಣಿ, ಅನುಬಂಧಗಳ ಸಮೇತ ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಉಪಯುಕ್ತವಾಗುವಂತೆ ನಿರೂಪಿಸಲಾಗಿದೆ.

About the Author

ಎಂ.ಎ. ಹೆಗಡೆ
(03 July 1948)

ಇವರು  ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು. ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್   ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ...

READ MORE

Related Books