ಶಿಶಿರ ವಸಂತ

Author : ಕೆ.ವಿ. ಅಕ್ಷರ

Pages 94

₹ 75.00




Year of Publication: 2011
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಶೇಕ್‌ಸ್ಪಿಯರ್ ತನ್ನ ಬರಹದ ಬದುಕಿನ ಕಡೆಯ ಘಟ್ಟದಲ್ಲಿ ಬರೆದ ರಮ್ಯ-ಹರ್ಷ-ದುರಂತ ಮಿಶ್ರಿತ ಗುಣದ ನಾಟಕಗಳಲ್ಲೊಂದು -- ‘ದಿ ವಿಂಟರ‍್ಸ್ ಟೇಲ್’. ನಾಲ್ಕು ನೂರು ವರ್ಷಗಳ ಕೆಳಗೆ, ನಮಗಿಂತ ತುಂಬ ಬೇರೆಯದೇ ಆದೊಂದು ಕಾಲದೇಶ ಸಂದರ್ಭದಲ್ಲಿ ರಚಿತವಾದ ಈ ನಾಟಕವು ೨೧ನೆಯ ಶತಮಾನದ ಆದಿಯಲ್ಲಿರುವ ನಮಗೆ ತುಂಬ ಪರಿಚಿತವೂ ಆಪ್ತವೂ ಆದ ಕಥೆಯಾಗಿ ಕಾಣುತ್ತದೆ ಎಂಬುದು ಈ ನಾಟಕದ ಮಹತ್ತ್ವಕ್ಕೆ ದ್ಯೋತಕ. ಶಿಶಿರದಲ್ಲಿ ಆರಂಭವಾಗಿ ವಸಂತದಲ್ಲಿ ಮುಕ್ತಾಯಗೊಳ್ಳುವ ಈ ನಾಟಕವು ಮೂಲತಃ ಕೌಟುಂಬಿಕ ಸಂಘರ್ಷಗಳಲ್ಲಿ ಮೊದಲುಗೊಂಡು ಅಂತಿಮವಾಗಿ ಸಾಮರಸ್ಯ ಸಾಧನೆಯ ದಿಕ್ಕಿಗೆ ಸಾಗುವ ಒಂದು ರೂಪಕಾತ್ಮಕವಾದ ರಮ್ಯ ಕಥೆ. ಆದರೆ, ಅಂಥ ರಮ್ಯ ಕಥನ, ಅಸಂಭವನೀಯ ಕಥೆ, ಉತ್ಪ್ರೇಕ್ಷಿತ ನಾಟಕೀಯತೆಗಳ ಮೂಲಕವೇ ಈ ನಾಟಕವು ತುಂಬ ಮಹತ್ತ್ವಪೂರ್ಣವಾದ ಗಹನ ಜಿಜ್ಞಾಸೆಗಳನ್ನು ಎತ್ತುತ್ತದೆ. ಗಂಡುಹೆಣ್ಣಿನ ಸಂಬಂಧಗಳು ದಾಂಪತ್ಯದ ಚೌಕಟ್ಟಿನೊಳಗೆ ಬೆಳೆದು ಪರಿಪಕ್ವಗೊಳ್ಳುವ ಬಗೆ ಯಾವುದು? ಪ್ರಕೃತಿಯನ್ನು ಪರಿಷ್ಕರಿಸಿ ಉತ್ತಮಗೊಳಿಸುವ ದಾರಿಯಾಗಿ ಕಾಣುವ ಸಂಸ್ಕ ತಿಯು ನಿಜವಾಗಿ ಅಂಥ ಕೆಲಸ ಮಾಡುತ್ತದೆಯೆ ಅಥವಾ ಅದಕ್ಕೆ ತದ್ವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆಯೆ? ವಾಸ್ತವದ ಬದುಕು ಮತ್ತು ವಾಸ್ತವವನ್ನು ಮೀರಿ ಕಟ್ಟುವ ಕಲೆಗಳ ಸಂಬಂಧ ಎಂಥದು? -- ಇವೇ ಮೊದಲಾದ ಹತ್ತಾರು ದಾರ್ಶನಿಕ ಪ್ರಶ್ನೆಗಳು ಈ ನಾಟಕದ ಭಿತ್ತಿಯಲ್ಲಿ ಹುದುಗಿವೆ. ಮತ್ತು ಇದೇ ಕಾರಣದಿಂದ, ಈ ನಾಟಕವು ಶೇಕ್‌ಸ್ಪಿಯರನ ಸುಪ್ರಸಿದ್ಧ ದುರಂತ ನಾಟಕಗಳಿಗಿಂತ ಭಿನ್ನಮಾರ್ಗ ಹುಡುಕುತ್ತ ‘ಅಭಿಜ್ಞಾನ ಶಾಕುಂತಲಮ್’ನಂಥ ಭಾರತೀಯ ನಾಟಕಗಳ ಸಮೀಪಕ್ಕೆ ಸರಿಯುತ್ತದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books