ಸೇತುಬಂಧನ

Author : ಕೆ.ವಿ. ಅಕ್ಷರ

Pages 88

₹ 95.00




Year of Publication: 2015
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಮರಳಿನ ಮೇಲೆ ಕಟ್ಟುವ ಆರ್ಥಿಕತೆ ಬಹಳ ದಿನ ಉಳಿಯುವುದಿಲ್ಲ ಎಂಬ ಮಾತಿನಿಂದ ಹೊರಟು, ಚೌಡಿ ಚಾಮುಂಡಿಯಾಗಿ ಅವತಾರ ಎತ್ತುವ ಮಹಾನಾಟಕದ ತನಕ ಹಳೆಯೂರಿನಲ್ಲಿ ನಡೆಯುವ ಪ್ರಸಂಗಗಳೇ ಕುತೂಹಲಕಾರಿ... ಟೂರಿಸಮ್ಮು ಎಂಬ ತಮಾಷೆ, ಮೊಬೈಲು ಎಂಬ ಜೋಕು, ದುಡ್ಡಿನೊಂದಿಗೆ ಬದಲಾಗುವ ವೇಷ, ನಾವು ಬದಲಾಗುವುದು ಕೇವಲ ಹೊರಗಿನಿಂದಲೇ ಎಂದು ಸಾಬೀತು ಮಾಡುವಂಥ ದೃಶ್ಯಗಳಲ್ಲಿ, ತಂತ್ರಜ್ಞಾನ ನಮ್ಮ ಭಾಷೆಯನ್ನು ತಿದ್ದುತ್ತಾ ಹೋಗುವ ವಿಚಿತ್ರ ಜಾಯಮಾನವೂ ನಾಟಕದಲ್ಲಿದೆ... ಇಡೀ ನಾಟಕ ನನ್ನನ್ನು ತಾಕಿದ್ದು ನಳದಮಯಂತಿಯ ಪ್ರಸಂಗದಲ್ಲಿ. ಬೇಕಾದ ಚಕ್ರವನ್ನು ಆವಾಹಿಸಿಕೊಂಡು ಬೇಕಾದ ರೂಪದಲ್ಲಿ ಕಲ್ಲನ್ನು ಕಾಣುವ ಋಷಿಯ ಕತೆಯಲ್ಲಿ. ಕೊನೆಯಲ್ಲಿ ಭಾಮೆ ಮತ್ತು ಕಿಟ್ಟಿ ಆಡುವ ನಾಟಕದಲ್ಲಿ. ಹಾಗೆ ನಾಟಕ ಆಡುತ್ತಾ ಆಡುತ್ತಾ ಅವರು ತಮಗೇ ಗೊತ್ತಿಲ್ಲದ ಮಾತುಗಳನ್ನು ಹೇಳುವಲ್ಲಿ... ಬದುಕಿನ ಪವಾಡ ಅಲ್ಲೇ ಇದೆ. ನಾವು ಅನುಭವಿಸಿದ ಕ್ಷಣವನ್ನು ನಾವು ಕೇವಲ ಕಲೆಯ ಮೂಲಕ ಮಾತ್ರ ಮತ್ತೊಮ್ಮೆ ಮುಖಾಮುಖಿಯಾಗಬಲ್ಲೆವು. ಒಂದು ಭೂತ-ಕ್ಷಣವನ್ನು ವರ್ತಮಾನ ಕ್ಷಣದಲ್ಲಿ ಎದುರಾಗುವ ವ್ಯಕ್ತಿ ಭೂತಕಾಲದಲ್ಲಿ ಬದುಕುತ್ತಾನೋ ವರ್ತಮಾನದಲ್ಲೋ ಅಥವಾ ಅವೆರಡರಲ್ಲೂ ಅಲ್ಲದ ಭವಿಷ್ಯದಲ್ಲೋ ಎಂಬ ಪ್ರಶ್ನೆಯನ್ನು, ನಾಟಕದ ಕೊನೆಯ ದೃಶ್ಯ ಮತ್ತು ಅದು ಮೂಡಿಸಿದ ತಲ್ಲಣ, ನನ್ನಲ್ಲಿ ಹುಟ್ಟುಹಾಕಿತು... ಈ ನಾಟಕ ಓದಿಸುವ ಮೂಲಕ ಕಲೆಯ ಮೇಲೆ ನಾವು ಇಡಬೇಕಾದ ನಂಬಿಕೆಯನ್ನು ಮರುಸ್ಥಾಪನೆ ಮಾಡಿದ್ದಕ್ಕೆ ಧನ್ಯವಾದ... - ಜೋಗಿ

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books