ಪುಸ್ತಕ ಸಮಯ

Author : ಟಿ.ಪಿ. ಅಶೋಕ

Pages 304

₹ 185.00




Year of Publication: 2011
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಟಿ ಪಿ.ಅಶೋಕ ಅವರು ಬರೆದಿರುವ ತೊಂಬತ್ತು ಪುಸ್ತಕಗಳ ಕಿರುವಿಮರ್ಶೆಗಳು ಸಂಕಲಿತ ರೂಪ ’ಪುಸ್ತಕ ಸಮಯ’. ಅಶೋಕರ ಈ ಪುಸ್ತಕ ಸಮಯವು ಕಳೆದ ನಾಲ್ಕೆ ದು ವರ್ಷಗಳಲ್ಲಿ ಪ್ರಕಟವಾಗಿರುವ ಹಿರಿಯ-ಕಿರಿಯ ಲೇಖಕರ ಮಹತ್ವದ ಪುಸ್ತಕಗಳನ್ನು ಒಳಗೊಂಡಿದ್ದು ಸಮಕಾಲೀನ ಕನ್ನಡ ಬರವಣಿಗೆಯ ಆಶಯ ಮತ್ತು ಸ್ವರೂಪಗಳನ್ನು ತೆರೆದು ತೋರಿಸುವಂತಿದೆ. ಆಯಾ ಪುಸ್ತಕದ ಹೂರಣವನ್ನು ಅನಾವರಣಗೊಳಿಸುತ್ತಲೇ, ಒಟ್ಟಾರೆ ಕನ್ನಡ ಪುಸ್ತಕ ಪರಿಸರದೊಂದಿಗೆ ಆಯಾ ಕೃತಿಯು ಸೃಷ್ಟಿಸಿಕೊಳ್ಳುವ ಸಂಬಂಧಗಳನ್ನು ಸೂಚಿಸುವುದು ಈ ಪುಸ್ತಕದ ವೈಶಿಷ್ಟ ವಾಗಿದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books