ಪ್ರಾತಿನಿಧಿಕತೆ ಮತ್ತು ಸ್ವಯಂಬಲ

Author : ಕೆ. ಕೇಶವ ಶರ್ಮ

Pages 282

₹ 260.00




Year of Publication: 2017
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಲೇಖಕ ಕೇಶವಶರ್ಮ ಕೆ ಅವರ ’ಪ್ರಾತಿನಿಧಿಕತೆ ಮತ್ತು ಸ್ವಯಂಬಲ’ ಎಂಬ ಕೃತಿಯು ಹಲವು ಲೇಖನಗಳ ವೈಚಾರಿಕ ಬರಹವಾಗಿದೆ.

ವಸಾಹತು ಸಂಸ್ಕೃತಿ ಅಧ್ಯಯನದ ರಾಜಕಾರಣಗಳು, ಬರಹದ ಸಾಕ್ಷಿ, ಹೆಬ್ಬೆಟ್ಟಿನ ಗುರುತು ಮತ್ತು ಬಾಯ್ಮಾತು ಮತ್ತು ಆಣೆಗಳು, ಜನಾಂಗ ಮತ್ತು ಕುಲ, ವಿಶ್ವಾತ್ಮಕತೆ, ರಾಷ್ಟ್ರ, ವಲಸೆಗಳು ಮತ್ತು ಬುದ್ದಿಜೀವಿಗಳು, ವಸಾಹತುವಾದ, ವಾಸ್ತವತೆ ಮತ್ತು ಬರಹಗಳು, ಶಿಸ್ತುಗಳು  ಮತ್ತು ಲೈಂಗಿಕ ರಾಜಕಾರಣ, ಅವಲಂಬಿತರ ಮನೋಸ್ಥಿತಿ, ಲೈಂಗಿಕ ವ್ಯತ್ಯಾಸ ಮತ್ತು ಯಜಮಾನಿಕೆ, ದೇಹ ಮತ್ತು ಲೈಂಗಿಕತೆ ಹಾಗೂ ವಿಧಿನಿಷೇಧಗಳು, ಬಯಕೆಗಳು ಮತ್ತು ಕಾರ್‍ಯಗಳು, ಇವುಗಳನ್ನು ಕುರಿತಾದ ಚಿಂತನಾ ಬರಹಗಳು ಈ ಕೃತಿಯಲ್ಲಿದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books