ಸಾಕಾರದತ್ತ ಸಮಾನತೆಯ ಕನಸು-ಮಹಿಳಾ ಪ್ರತಿರೋಧದ ನೆಲೆಗಳು

Author : ಪ್ರೀತಿ ಶುಭಚಂದ್ರ

Pages 168

₹ 120.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಚಿಂತಕರು ನಡೆಸಿದ ವಿಚಾರ ಮಂಥನದ ಫಲ ’ಸಾಕಾರದತ್ತ ಸಮಾನತೆಯ ಕನಸು-ಮಹಿಳಾ ಪ್ರತಿರೋಧದ ನೆಲೆಗಳು’ ಕೃತಿ. ಡಾ. ಪ್ರೀತಿ ಶುಭಚಂದ್ರ, ಎಂ. ಎನ್. ಸುಮನಾ ಅವರು ಕೃತಿಯನ್ನು ಸಂಪಾದಿಸಿದ್ದಾರೆ.

ಪ್ರೀತಿ ಶ್ರೀಮಂಧರ ಕುಮಾರ್, ಪ್ರೊ. ಸಿ. ಬಸವರಾಜು, ಸುನಂದಾ ಜಯರಾಮ್, ಡಾ. ಕಾರಿನ್ ಕುಮಾರ್, ಡಾ. ನೀಲಗಿರಿ ತಳವಾರ್, ಬಾನು ಮುಷ್ಠಾಕ್, ಶಕುನ್, ಮಲ್ಲಿಗೆ, ಪಿ.ಪಿ. ಬಾಬುರಾಜ್, ಅಕೈ ಪದ್ಮಶಾಲಿ, ಅರವಿಂದ ನಾರಾಯಣ, ಡಾ. ವಸುಂಧರಾ ಭೂಪತಿ, ಡಾ. ಎಚ್. ಎಸ್. ಅನುಪಮಾ, ದು. ಸರಸ್ವತಿ, ಕೆ. ನೀಲಾ, ಸಬೀಹಾ ಭೂಮಿಗೌಡ, ಸುಮನಾ ಎಂ. ಎನ್. ಮೊದಲಾದವರ ಚಿಂತನೆಗಳನ್ನು ಅಕ್ಷರರೂಪದಲ್ಲಿ ಹೊಂದಿದೆ ಕೃತಿ. 

ಕೃತಿಯಲ್ಲಿ ಮೂರು ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಮಹಿಳಾ ಹೋರಾಟ ಕುರಿತಂತೆ ಪ್ರೀತಿ ಶ್ರೀಮಂಧರ ಕುಮಾರ್ ಚರ್ಚಿಸಿದ್ದಾರೆ. ಪ್ರೊ. ಸಿ. ಬಸವರಾಜು ಮಹಿಳಾ ವಿರೋಧಿ ಮನಸ್ಸುಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ವಿವರಿಸಿದ್ದಾರೆ. ಅತ್ಯಾಚಾರ ಕಾನೂನು ಮತ್ತು ವಯಸ್ಸಿನ ಕುರಿತಂತೆ ಬಾನು ಮುಷ್ಪಾಕ್ ಚರ್ಚಿಸಿದ್ದಾರೆ. ಗಲ್ಲು ಶಿಕ್ಷೆ ಅತ್ಯಾಚಾರವನ್ನು ತಡೆಯಬಹುದೇ ಎಂಬ ವಿಷಯದಲ್ಲಿ ಶಕುನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೈಂಗಿಕತೆ ಮತ್ತು ಹಿಂಸೆ ನಡುವಿನ ತೆಳು ಪರದೆಯನ್ನು ಅಕ್ಕೈ ಪದ್ಮಶಾಲಿ ಹರಿದಿದ್ದಾರೆ. ಎರಡನೇ ಭಾಗದಲ್ಲಿ ಬೀದಿ ಬದಿಯ ಪರ್ಯಾಯ ಶಕ್ತಿಯನ್ನು ಅನುಪಮಾ ತೆರೆದುಕೊಟ್ಟಿದ್ದಾರೆ. ಹಿಂಸೆ ಕಗ್ಗತ್ತಲಲ್ಲೂ ಒಂದಿಷ್ಟು ನಿರೀಕ್ಷೆ ಹುಟ್ಟಿಸುವ ವಿಷಯಗಳ ಕುರಿತು ದು. ಸರಸ್ವತಿ ಬೆಳಕು ಚೆಲ್ಲಿದ್ದಾರೆ. ಮೂರನೇ ಭಾಗದಲ್ಲಿ ಮಹಿಳಾ ಹೋರಾಟದ ಕಲ್ಲುಮುಳ್ಳಿನ ದಾರಿಯ ಸಾಹಸ ಕಥನದ ಕಡೆಗೆ ಇಮಾ ಲೋರೆಂಬಮ್ ನಾ ವಿವರಿಸಿದ್ದಾರೆ.

ಸಮಾನತೆಯ ಕನಸನ್ನು ಸಾಕಾರಗೊಳಿಸುವತ್ತ ಸಾಗಿರುವ ಮಹಿಳಾ ಲೋಕದ ಎದುರಿರುವ ಸವಾಲುಗಳನ್ನು ಕೃತಿ ಸಮರ್ಥವಾಗಿ ತೆರೆದಿಡುತ್ತದೆ. 

About the Author

ಪ್ರೀತಿ ಶುಭಚಂದ್ರ
(01 September 1957)

ಮಹಿಳಾ ಅಧ್ಯಯನದ ಬಗ್ಗೆ ವಿಶೇಷ ಅಸ್ಥೆಯುಳ್ಳ ಪ್ರೀತಿ ಶುಭಚಂದ್ರ ಅವರು 1957 ಸೆಪ್ಟಂಬರ್ 01 ರಂದು ಜನಿಸಿದರು. ’ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ’ ಒಂದು ಅಧ್ಯಯನಕ್ಕೆ ಪಿ.ಎಚ್.ಡಿ ದೊರೆತಿದ್ಧು ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು. ’ಸೃಜನೆಯ ಮೂಡು’ ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ). ’ಕನ್ನಡ ಕೈದೀವಿಗ” ಪುಸ್ತಕಗಳ ವಿಮರ್ಶಾ ಪುಸ್ಕವನ್ನು ಪ್ರಕಟಿಸಿದ್ದಾರೆ.  ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯನಂದ ಪುರಸ್ಕಾರ (ಪಿಎಚ್.ಡಿ. ಕೃತಿಗೆ), ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ, ದಕ್ಷಿಣಭಾರತ ಜೈನ ಮಹಾ ...

READ MORE

Related Books