ಮಹಿಳೆ

Author : ಎ.ಪಿ. ಮಾಲತಿ

Pages 108

₹ 100.00




Published by: ಅಖಿಲ ಹವ್ಯಕ ಮಹಾಸಭಾ
Address: ಹವ್ಯಕ ಅಧ್ಯಯನ ಕೇಂದ್ರ, 101/ಎ, 11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003
Phone: 08023348193

Synopsys

ಮಹಿಳೆಯರ ಸಮಸ್ಯೆ, ಬದುಕು-ಸಾಧನೆ-ಜಾಗೃತಿ-ಆಶಯ ಕುರಿತು ಲೇಖಕಿ ಎ.ಪಿ. ಮಾಲತಿ ಅವರು ಬರೆದ ಕೃತಿ. ‘ಮಹಿಳೆ- ಪರಿವರ್ತನೆಯ ಹಾದಿಯಲ್ಲಿ’ . ಮಹಿಳೆ-ಸಾಮಾಜಿಕ ಸ್ವಾಸ್ಥ್ಯ, ಪರಿವರ್ತನೆಯ ಹಾದಿಯಲ್ಲಿ ಮಹಿಳೆಯರು, ವಿವಾಹ ವಿಚ್ಛೇದನ-ಒಂದು ಚಿಂತನೆ, ಶಿಕ್ಷಣದಲ್ಲಿ ಹೆತ್ತವರ ಪಾತ್ರ, ಕೌಟುಂಬಿಕ ಸಂಪ್ರದಾಯದ ಉಳಿವಿನಲ್ಲಿ ಹವ್ಯಕ ಮಹಿಳೆಯರ ಪಾತ್ರ, ಕೃಷಿಯಲ್ಲಿ ಒಲವು-ನಿಲುವು, ತಾಯಿ-ಮಗಳು-ಮೊಮ್ಮಗಳು-ಅಭಿರುಚಿಯ ಚೌಕಟ್ಟಿನಲ್ಲಿ, ಮಹಿಳಾ ಚಿಂತನೆಯ ಫಣಿಯಮ್ಮ ಕಾದಂಬರಿ ಹೀಗೆ ಚಿಂತನಾ ಪರ 10 ಅಧ್ಯಾಯಗಳನ್ನು ಕೃತಿ ಒಳಗೊಂಡಿದೆ.

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books