ಫೆಮಿನಿಸ್ಟ್ ಮ್ಯಾನಿಫೆಸ್ಟೊ

Author : ಕಾವ್ಯಶ್ರೀ ಎಚ್.

Pages 64

₹ 50.00




Year of Publication: 2019
Published by: ಲಡಾಯಿ ಪ್ರಕಾಶನ.
Address: 21, ಪ್ರಸಾದ ಹೋಟೆಲ್, ಗದಗ- 582101
Phone: 080-22443996

Synopsys

ನೈಜೀರಿಯಾದ ಲೇಖಕಿ ಚಿಮಮಾಂಡ ಅವರ 'ಫೆಮಿನಿಸ್ಟ್‌ ಮ್ಯಾನಿಫೆಸ್ಟೊ' ಕೃತಿಯಲ್ಲಿ ಮಗಳನ್ನು ಬೆಳೆಸಲು ಬೇಕಾದ 15 ಸಲಹೆಗಳಿವೆ. ಆದರೆ ಇದು ಸ್ತ್ರೀವಾದದ ಪ್ರನಾಳಿಕೆಯಂತೆಯೂ ಕಂಡುಬರುವುದು ಸೋಜಿಗ. ಸ್ತ್ರೀವಾದವು ನಮ್ಮೊಳಗೆ ಹಾಸುಕೊಕ್ಕಾಗಬೇಕಾದ ಕುರಿತು ವಿವರಿಸಿದ್ದಾರೆ. ಈ ಕೃತಿಯನ್ನು ಲೇಖಕಿ ಕಾವ್ಯಶ್ರೀ ಎಚ್ ಅ‌ವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಕಾವ್ಯಶ್ರೀ ಎಚ್.

ಕವಯತ್ರಿ, ಲೇಖಕಿ ಕಾವ್ಯಶ್ರೀ ಎಚ್. ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನೈಜೀರಿಯಾದ ಲೇಖಕಿ ಚಿಮಮಾಂಡ ಅವರ 'ಫೆಮಿನಿಸ್ಟ್‌ ಮ್ಯಾನಿಫೆಸ್ಟೊ' ಕೃತಿಯನ್ನು ಅದೇ ಶೀರ್ಷಿಕೆಯಡಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ‘ಅಗ್ನಿದಿವ್ಯ’ ಅವರ ಮತ್ತೊಂದು ಕೃತಿ.  ...

READ MORE

Reviews

ನೈಜೀರಿಯಾದ ಲೇಖಕಿ ಚಿಮಮಾಂಡ ಎನ್‌ಗೋಜಿ ಅಡಿಚಿಯೆ ಅವರ 'ಫೆಮಿನಿಸ್ಟ್ ಮ್ಯಾನಿಫೆಸ್ಟೋ' ಎನ್ನುವ ಪುಟ್ಟ ಪುಸ್ತಕದಲ್ಲಿ ಮಗಳನ್ನು ಬೆಳೆಸಲು 15 ಸಲಹೆಗಳಿವೆ. ಸ್ತ್ರೀವಾದದ ಅರ್ಥವನ್ನು ವಿಸ್ತರಿಸಿರುವ ಈ ಲೇಖಕಿ ನೀಡಿರುವ ಸಲಹೆಗಳನ್ನು ಹೆಣ್ಣು ಹೆತ್ತವರಷ್ಟೇ ಅಲ್ಲ, ಎಲ್ಲರೂ ಓದಬೇಕು. ಇದನ್ನು ಓದುವ ಮೂಲಕ ಗಂಡಸರು ತಮ್ಮ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕನ್ನಡದ್ದೇ ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಈ ಪುಸ್ತಕವನ್ನು ಡಾ.ಕಾವ್ಯಶ್ರೀ ಎಚ್. ಅನುವಾದಿಸಿದ್ದಾರೆ.

15 ಡಿಸೆಂಬರ್‌ 2019 

ಕೃಪೆ : ವಿಜಯ ಕರ್ನಾಟಕ

Related Books