ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ

Author : ಎ. ಜ್ಯೋತಿ

Pages 48

₹ 30.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಕೃತಿಯ ಆರಂಭದಲ್ಲಿ ಮಹಿಳೆಯ ಮೇಲೆ ಹೇಗೆ ಹಂತಹಂತ ವಾಗಿ ಧರ್ಮದ ಹೆಸರಲ್ಲಿ ಕಾನೂನುಗಳು ಹೇರಲಾಯಿತು ಎನ್ನುವುದನ್ನು ಗುರುತಿಸಲಾಗಿದ್ದು,  ಋಗ್ವದ ಕಾಲದಲ್ಲಿ ಮಹಿಳೆಯರಿಗಿದ್ದ ಹಕ್ಕುಗಳ ಬಗ್ಗೆಯೂ ಪ್ರಸ್ತಾಪಿಸುತ್ತಾರೆ. ಗೌತಮನ ಅನಂತರ ಬಂದ ಬೌದ್ಧಯಾನ ನಿಂದಲೂ ಮಹಿಳೆಯರ ಬದುಕು ನಿಕೃಷ್ಟವಾಯಿತು ಎಂದು ಲೇಖಕರು ಹೇಳುತ್ತಾರೆ. ಬೌದ್ಧಯಾನ ಬಹುಪತ್ನಿತ್ವವನ್ನು ಬೆಂಬಲಿಸುತ್ತಿದ್ದ. ಇವನ ದೃಷ್ಟಿಯಲ್ಲಿ ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕಾಗಿಯೇ ಪತ್ನಿಯನ್ನು ತೊರೆಯುವ ಅವಕಾಶ ಪತಿಗಿತ್ತು, ಪುರಾತನ ಕಾಲದಲ್ಲಿ ಬೇರೆ ಬೇರೆ ಮಹರ್ಷಿಗಳ ಮೂಲಕ ಹೆಣ್ಣಿನ ಬದುಕಿನಲ್ಲಿ ಆದ ಏರುಪೇರುಗಳನ್ನು ಗುರುತಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ಭಾರತದಲ್ಲಿ ಮಹಿಳಾ ಚಳವಳಿಯ ಉಗಮದ ಹಿಂದಿರುವ ಬೇರೆ ಬೇರೆ ರಾಜಕೀಯ ಕಾರಣಗಳನ್ನು ಈ ಕೃತಿ ವಿವರಿಸುತ್ತದೆ.

About the Author

ಎ. ಜ್ಯೋತಿ

ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ  ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.    ...

READ MORE

Related Books