ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-3)

Author : ಗಿರಿಜಾ ಶಾಸ್ತ್ರಿ

Pages 106

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ತಮ್ಮ ದೇಹವು ಅಳಿದರೂ, ಭಾರತೀಯರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಅಚ್ಚಳಿಯದಂತೆ ಬಿಟ್ಟು ಹೋಗಿರುವ ಏಳು ಪ್ರತಿಭಾವಂತ ವ್ಯಕ್ತಿಗಳ ಜೀವನ, ಸಾಧನೆಗಳ ಸಂಕ್ಷಿಪ್ತ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಈ ಮಹಾನ್‌ ವ್ಯಕ್ತಿಗಳೆಂದರೆ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸ್ವಾಮಿ ರಾಮತೀರ್ಥರು, ದಾದಾಭಾಯಿ ನವರೋಜಿಯವರು, ಡಾ. ಅನಿಬೆಸೆಂಟ್, ಶ್ರೀ ಅರವಿಂದರು ಮತ್ತು ಸರೋಜಿನಿ ನಾಯ್ಡು ಮೊದಲಾದ ಪ್ರಮುಖ ವ್ಯಕ್ತಿಗಳ ಕುರಿತ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books