ಅನ್ಪಾಲ್

Author : ಕೆ. ವೈ ಅಬ್ದುಲ್ ಹಮೀದ್

Pages 86

₹ 60.00




Year of Publication: 2021
Published by: ಸ್ತುತಿ ಪ್ರಕಾಶನ
Address: ಸಹಕಾರಿ ಸದನ, ಮಿಷನ್ ಸ್ಟ್ರೀಟ್, ಮಂಗಳೂರು - 575001
Phone: 9895581034

Synopsys

‘ಅನ್ಪಾಲ್’ ಕೃತಿಯು ಕೆ. ವೈ ಅಬ್ದುಲ್ ಹಮೀದ್ ಅವರ ಅನುವಾದಿತ ಕೃತಿಯಾಗಿದೆ. ಎ. ಸಯೀದ್ ಅವರು ಕೃತಿಯ ಮೂಲ ಕರ್ತೃ. ಇಲ್ಲಿ ಸೃಷ್ಟಿ ಮತ್ತು ಸೃಷ್ಟಿಕರ್ತನ ಮಧ್ಯೆ ಇರುವಂತಹ ಸಂಬಂಧದ ಕುರಿತು ಚರ್ಚೆಯಾಗುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ಮಧ್ಯೆ ಇರುವ ಸಂಬಂಧವೆಂದರೆ ಬರೀ ಆಚಾರ ಅನುಷ್ಠಾನಗಳಿಗೆ ಸೀಮಿತಗೊಂಡ ವಿಚಾರ ಮಾತ್ರವಲ್ಲ. ಸ್ವಂತ ದೇಹ, ಕುಟುಂಬ ಮತ್ತು ಪರಿಸರದ ಸುತ್ತ ಮಾಡಿ ಮುಗಿಸಬೇಕಾದ ಬಾಧ್ಯತೆಯೊಂದಿಗೆ ಓರ್ವ ವ್ಯಕ್ತಿಯ ದೇವನೊಂದಿಗಿರುವ ಬಾಧ್ಯತೆಯು ಹಾಸುಹೊಕ್ಕಾಗಿದೆ. ಭೂಮಿಯ ಮೇಲೆ ಅಲ್ಲಾಹುನ ಪ್ರತಿನಿಧಿಯಾಗಬೇಕೆಂಬ ಗುರಿಯನ್ನು ತಲುಪುವ ವೇಳೆ ವಿಶ್ವಾಸಿಗೆ ಸ್ವಂತದ ಪ್ರಾಮುಖ್ಯತೆ ನಷ್ಟಗೊಳ್ಳುತ್ತದೆ. ದೇವಾಜ್ಞೆಗೆ ಸಂಪೂರ್ಣವಾಗಿ ವಿಧೇಯನಾಗುವ ವ್ಯಕ್ತಿ ಅಂತಿಮವಾಗಿ ಅಲ್ಲಾಹುನ ಆಯುಧವಾಗಿ ಮಾರ್ಪಡುತ್ತಾನೆ. ಈ ಆಯುಧಗಳನ್ನು ಉಪಯೋಗಿಸಿ ಅಲ್ಲಾಹುನ ತನ್ನ ಕೆಲವು ತೀರ್ಮಾನಗಳನ್ನು ಮಾನವನ ಮಧ್ಯೆ ಜಾರಿಗೊಳಿಸುತ್ತಾನೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

About the Author

ಕೆ. ವೈ ಅಬ್ದುಲ್ ಹಮೀದ್

ಲೇಖಕ ಕೆ. ವೈ ಅಬ್ದುಲ್ ಹಮೀದ್ ಅವರು ಅನುವಾದಕರು. ಕೃತಿಗಳು : ಸತ್ಯವಿಶ್ವಾಸಿಯ ದಿನಚರಿ (ಅನುವಾದಿತ ಕೃತಿ), ಅನ್ಪಾಲ್ (ಅನುವಾದಿತ ಕೃತಿ), ಉಲಮಾ ಹೋರಾಟಗಾರರು ವೈಚಾರಿಕ ಲೇಖನಗಳು), ಮುಸ್ಲಿಮ್ ಸಬಲೀಕರಣ (ಧಾರ್ಮಿಕ ಲೇಖನಗಳು) ...

READ MORE

Related Books