ರಾಮಾಯಣ

Author : ಎಸ್. ಪಟ್ಟಾಭಿರಾಮನ್

Pages 168

₹ 108.00




Year of Publication: 2013
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಲೇಖಕ ಐಜೆನ್ ಬಿ. ಅವರು ರಾಮಾಯಣ ಕುರಿತು ಮಕ್ಕಳಿಗಾಗಿ ಇಂಗ್ಲಿಷ್ ನಲ್ಲಿ ಬರೆದ ಕೃತಿ-ರಾಮಾಯಣ. ಇದನ್ನು ಎಸ್. ಪಟ್ಟಾಭಿರಾಮನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಕಾವ್ಯವು ಹಾಸುಹೊಕ್ಕಾಗಿದೆ. ಅಲ್ಲಿ ಪ್ರತಿಪಾದಿತ ನಿಯಮ-ತತ್ವ-ಆದರ್ಶಗಳು ಭಾರತೀಯ ಸಂಸ್ಕೃತಿಯನ್ನು ಆವರಿಸಿವೆ. ಮಕ್ಕಳ ಮನೋವಿಕಾಸಕ್ಕಾಗಿ ಇಂತಹ ಕೃತಿಗಳು ಅಗತ್ಯ. ಈ ಹಿನ್ನೆಲೆಯಲ್ಲಿ ರಚಿಸಲಾದ ಕೃತಿ ಇದು. ಸರಳ ಭಾಷೆಯಲ್ಲಿ ಅನುವಾದವಾಗಿದ್ದು ಮಾತ್ರವಲ್ಲ; ಸನ್ನಿವೇಶಕ್ಕೆ ಅನುಗುಣವಾಗಿ ಸುಂದರ ಚಿತ್ರಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. 

About the Author

ಎಸ್. ಪಟ್ಟಾಭಿರಾಮನ್

ಎಸ್. ಪಟ್ಟಾಭಿರಾಮನ್  ಹಿರಿಯ ಪತ್ರಕರ್ತರು. ಮೈಸೂರಿನವರಾದ ಎಸ್. ಪಟ್ಟಾಭಿರಾಮನ್ ಅವರು ಚಾಮರಾಜನಗರದ ಸರಗೂರಿನಲ್ಲಿ  1934 ರಲ್ಲಿ ಜನಿಸಿದರು.  ಇವರು ಪತ್ರಿಕೋದ್ಯಮ ಎಂ.ಎ ಮುಗಿಸಿ, ಪ್ರಜಾವಾಣಿ ಮೈಸೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಾದೇಶಿಕ ವಿಶೇಷ ವರದಿಗಾರರಾಗಿ ಹತ್ತು ವರ್ಷ ಕಾರ್‍ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ.  ಭಾರತ ಸೇವಾದಳ, ರಾಷ್ಟ್ರೀಯ ಅಂಧರ ಒಕ್ಕೂಟದಂಥ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಶೈಕ್ಷಣಿಕ ಸಾಮಾಜಿಕ ಸಂಘ ಸಂಸ್ಥೆಗಳ ಕ್ರಿಯಾಶೀಲ ...

READ MORE

Related Books