ಮಳೆ (ಕಾದಂಬರಿ)

Author : ಚಿದಾನಂದ ಸಾಲಿ

Pages 100

₹ 100.00




Year of Publication: 2021
Published by: ಪಲ್ಲವ ಪ್ರಕಾಶನ
Address: ಚೆನ್ನಪಟ್ಟಣ., ವಯಾ ಎಮ್ಮಿಗನೂರು, ಜಿಲ್ಲೆ: ವಿಜಯನಗರ
Phone: 94803 53507.

Synopsys

ಕವಿ-ಕಥೆಗಾರ ಚಿದಾನಂದ ಸಾಲಿ ಅವರು ಬರೆದ ಕಾದಂಬರಿ-ಮಳೆ. ಕಥೆಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Reviews

‘ಮಳೆ’ ಕೃತಿಯ ವಿಮರ್ಶೆ

ಋತುಮಾನದ ಅವತರಣಿಕೆಗಳಲ್ಲಿ ಮಳೆ ಎನ್ನುವುದು ಎಲ್ಲರನ್ನೂ, ಎಲ್ಲಾ ಕಾಲಕ್ಕೂ  ಕಡುವ ಸಂಗತಿ. ,ಮಳೆಯ ಮಗ್ಗಲುಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವ ನೋವಿನ ಎಳೆಯನ್ನು ಎಳೆಎಳೆಯಾಗಿ ಅಕ್ಷರದ ಮೂಲಕ ಮನ ಮಿಡಿಯುವ ಹಾಗೆ ದಾಖಲಿಸುವುದು ಬರವಣಿಗೆಯ ಸಾಹಸವೇ ಆಗಿದೆ. 

ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಂತಹ ಮಳೆಯ ಆರ್ಭಟಗಳನ್ನು ಅನುಭವಿಸಿದ್ದೇವೆ. ಮಣ್ಣಿನ ಗ೦ಧದಲ್ಲಿ ಅದ್ದಿ ತೆಗೆದ ಬದುಕಿಗಾಗಿ ತೇದ - ಅನೇಕ ಜೀವಗಳ ನೋವು ಮಳೆಯ ಕಥಾ ವಸ್ತುವಿನೊಂದಿಗೆ ತೆರೆದುಕೊಳ್ಳುವುದು ಮಳೆ ಕಾದಂಬರಿಯ ವಿಶೇಷತೆ. -

ಕನ ಡ ಸಾಹಿತ್ಯದ ಮಹತ್ವದ ಬರಹಗಾರರಲ್ಲಿ ಸಾಲಿ ಮಾಸರರೆಂದೇ ಕರೆಸಿಕೊಳ್ಳುವ ಚಿದಾನ೦ದ ಸಾಲಿಯವರ ಸಾಹಿತ್ಯದ ಪ್ರಕಾರಗಳು ಅಧ್ಯಯನಪೂರ್ಣವಾದದ್ದು. ಚಿದಾನಂದ ಸಾಲಿಯವರ ಮಳೆ ಕಾದ೦ಬರಿಯ ನೀಳ್ಗತೆ ಮನುಷ್ಯತ್ವದ ಕೃತಿಯಾಗಿ ಗಮನಸೆಳೆಯುವ೦ತಹದು. ಮಳೆ ಕಾದಂಬರಿ ಎನು ವುದು ಬಾನು ಭೂಮಿಯನ್ನು ಮಾತ್ರ ಬೆಸೆಯದೇ ಬದುಕನ್ನೂ ಬೆಸೆಯುವ ಮೂಲಕ ನುಡಿ ಚಿತ್ರವಾಗಿ ಆಪ್ತವಾಗಿದೆ. ಹೇಳಲಾಗದ ಸಂಕಟಗಳನ್ನು ಅಭಿವ್ಯಕ್ತಿಸುವ ಗಮ್ಯವಾದ ಒಳನೋಟಗಳನ್ನು ಬಯಲುಸೀಮೆಯ ಭಾಷೆಯ ಆಪ್ತ ನಿರೂಪಣೆಯೊ೦ದಿಗೆ ಎಲ್ಲೂ ಸೋಲದೇ ಮನಸ್ಸನ್ನು ಕರಗಿಸುವಲ್ಲಿ ಪಡೆದಿದೆ, ಮಳೆ ಕೇವಲ ಅನುಭವದ ರೂಪಕ್ಕೆ ಮಾತ್ರ ದಕ್ಕದೇ ಅದರ ಪರಿಣಾಮದ ಸಾಧ್ಯತೆಗಳನ್ನು ಕಥನ ರೂಪದಲ್ಲಿ ಕಟ್ಟಿಕೊಡುವ ಕಸುಬುದಾರಿಕ ಈ ಕಾದಂಬರಿಯಲ್ಲಿದೆ.

ಮಳೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕಿನ ಪುಟಗಳನ್ನು ಸೆರೆ ಹಿಡಿಯುವ ತವಕ ಚಿದಾನಂದ ಸಾಲಿಯವರ ಬರಹದ ಆಶಯವಾಗಿದೆ. ಕೆಲ ವರ್ಷಗಳ ಹಿಂದೆ ಸಾಮಾಜಿಕ ಕಳಕಳಿಯ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಾಗ ಸಾಲಿಯವರ ಕಣ್ಣೆದುರಿಗೆ ದುರಿಗೆ ಬಿಡಿಸಿಟ್ಟ ರೂಪಕಗಳನ್ನೆಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಹಾಕುವಾಗ ತಾವೂ ಕರಗಿಹೋಗಿ, ಓದುಗನ ಅ೦ತರ೦ಗದ ಕದ ತಟ್ಟಿದ್ದಾರೆ. ಮಳೆಯು ಗೋಳಿನ ಕಥೆ ಮಾತ್ರವಾಗದೇ ವ್ಯಥೆಗಳಿಗೆ ದಾರಿ ಹುಡುಕುವ ಬೆಳಕಿನ ರೇಖೆಯಾಗಿ ಇಲ್ಲಿಯ ಕಥಾವಸ್ತು ಗಟ್ಟಿಯಾಗಿ ನಿಲ್ಲುತ್ತದೆ. ಮಾನವೀಯ ಮುಖಗಳನ್ನು ದಾಖಲಿಸುವ ಸಾಲಿಯವರ ನುಡಿಚಿತ್ರಗಳು ಒಂದು ಸಿನಿಮಾದ ಹಾಗೆ ಎದೆಗ೦ಟಿಕೊ೦ಡು ದಾಖಲುಗೊಳ್ಳುತ್ತದೆ. ಕವಿ ಹೃದಯದ ಸಾಲಿಯವರಿಗೆ ಮಳೆಯ ರೂಪಕಗಳನ್ನು ಕಡೆದು ನಿಲ್ಲಿಸುವುದು ಎಷ್ಟೊ೦ದು ಹಗುರ ಅನಿಸಿದರೂ ಅಡಗಿಕೂತ ಬರವಣಿಗೆಯ - ಸಾಲುಗಳನ್ನು ಹಸಿಯಾಗಿ ಈ ಕಾದ೦ಬರಿಯಲ್ಲಿ ಪಡಿಮೂಡಿಸಿದ್ದು ಅರೂಪವೆನಿಸಿದೆ.

ಮಳೆಯ ತಾಪತ್ರಗಳನ್ನು ಮೊಗೆದು ಓದುಗನ ಅ೦ತರ೦ಗಕ್ಕೆ ಚೆಲ್ಲುವ ಈ ಮಳೆ ಕಾದ೦ಬರಿಯ ಬರವಣಿಗೆಯ ಸೊಗಸು ಸಾಲಿಯವರ ಬರಹದ ಆಳವನ್ನು ಕಳೆದು ನಿಲ್ಲಿಸುತ್ತದೆ. ಕೇಶವ ಮಳಗಿಯವರು ಈ ಕೃತಿಯ ಮುನ್ನುಡಿಯಲ್ಲಿ ಹೇಳಿರುವ ಹಾಗೆ ಮುಖ್ಯವಾಹಿನಿಯ ಇತಿಹಾಸದ ಪುಟಗಳಿಂದ ಉದ್ದೇಶಪೂರ್ವಕವಾಗಿ ಕಣ್ಮರೆಯಾಗುವ ವರ್ತಮಾನವನ್ನು ಹಿಡಿಯುವ ಹೊಣೆಗಾರಿಕೆಯ ಜಾಣ್ಮೆ ಮಹತ್ವದ್ದು ಎನ್ನುತ್ತಾರೆ. ಈ ಕಾದಂಬರಿಯ ಕುರಿತಾಗಿ ಅನೇಕ ಕನ್ನಡದ ಬರಹಗಾರರು ತಮ್ಮ ಅಭಿಪ್ರಾಯವನ್ನು  ಬೆನ್ನುಡಿಯಲ್ಲಿ ಬರೆದಿದ್ದಾರೆ. ಬೊಗಸೆಯಲ್ಲಿ ಹಿಡಿಯಲಾಗುವ ಮಳೆಯ ಹನಿಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟ ಈ ಕೃತಿಯ ಓದು ಕಾದಂಬರಿ ಕಾದಂಬರಿ ಸಾಹಿತ್ಯದಲ್ಲಿ ಮಹತ್ವದ ಮೈಲಿಗಲ್ಲು. 

(ಬರಹ :ದತ್ತಾತ್ರೇಯ ಭಟ್ಟ, ಕೃಪೆ : ವಿಶ್ವವಾಣಿ)

Related Books