ಮರದ ಹನಿ ಮಣ್ಣಿಗೆ

Author : ಚಿದಾನಂದ ಸಾಲಿ

Pages 88

₹ 60.00




Year of Publication: 2019
Published by: ಋತು ಪ್ರಕಾಶನ
Address: 7-5-148/4, ಜವಹರನಗರ ರಾಯಚೂರು -584103
Phone: 9845471861

Synopsys

ಲೇಖಕ ಚಿದಾನಂದ ಸಾಲಿ ತಮ್ಮ ಸಾಹಿತ್ಯ ಕೃಷಿಯ ಜೊತೆಗೆ ಪತ್ರಿಕೋದ್ಯಮದಲ್ಲಿಯೂ ಆಸಕ್ತಿ ತಳೆದವರು. ಕಿರುಗತೆ ಮಾದರಿಯ ಬರಹಗಳನ್ನು ಪತ್ರಿಕೋದ್ಯಮದ ಪರಿಭಾಷೆಯಲ್ಲಿ ಹೇಳಲಾಗುವ  ತುಂಬುಗ (Fillers) ಗಳನ್ನು ಇಲ್ಲಿ ಒಂದೆಡೆ ಸಂಗ್ರಹಿಸಿ ಲೇಖನಗಳ  ಮೂಲಕ ಪ್ರಕಟಿಸಿದ್ದಾರೆ. ಸುಮ್ಮನಿದ್ದೇ ಸಾವಿರ ಮಾತಾಡುತ್ತದೆ ಸೋಗಲಾಡಿ ಮೌನ, ಯಾರು ಹೇಳಿ ಮಾಡಿಸಿದ ಹೂವದು?, ಮೂಕ ಹಕ್ಕಿಯು ಹಾಡುತಿದೆ, ಎಲ್ಲ ಮುಗಿದ ಮೇಲೆ, ಹೀಗೆ ಇವರ ಲೇಖನಗಳ  ಪ್ರತಿಯೊಂದು ಶೀರ್ಷಿಕೆಗಳು ಚಿದಾನಂದ ಸಾಲಿಯವರ ಸ್ವಗತಕ್ಕೂ ಒಂದು ನಿರೂಪಣೆಯಂತಿವೆ. ಜೀವನದರ್ಶನ, ಬದುಕಿನ ಪ್ರಸಂಗಗಳು, ಮನುಷ್ಯ ಕಟ್ಟಿಕೊಳ್ಳುವ ಕಲ್ಪನೆ ಮುಂತಾದ ನೆಲೆಗಳಿಂದ ವಸ್ತುಗಳನ್ನು ಪಡೆದುಕೊಳ್ಳುವ ಈ ಬರಹಗಳು ಈ ಪುಸ್ತಕದಲ್ಲಿ  ಅತಿ ಹೆಚ್ಚಿನ ಪರಿಣಾಮ ನೀಡಬಲ್ಲ ಬರಹಗಳಾಗಿ  ’ಮರದ ಹನಿ ಮಣ್ಣಿಗೆ’ ಪುಸ್ತಕದಲ್ಲಿ ಪ್ರಕಟವಾಗಿವೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books