ಎಲೆಯುದುರೂ ಕಾಲ

Author : ಚಿದಾನಂದ ಸಾಲಿ

Pages 70

₹ 50.00




Year of Publication: 2019
Published by: ಧನ್ಯಾ ಪ್ರಕಾಶನ
Address: ಗದಗ
Phone: 9448357024

Synopsys

ತೆಲುಗು ಕವಯತ್ರಿ ಮಹೆಜಬೀನ್ ಅವರ 'ಆಕು ರಾಲು ಕಾಲಂ’ ಕವನ ಸಂಕಲನದ ಭಾವಾನುವಾದ. ತೆಲುಗು ಕವಿತೆಗಳನ್ನು ಚಿದಾನಂದ ಸಾಲಿ ಅವರು ಸೊಗಸಾಗಿ ಕನ್ನಡೀಕರಿಸಿದ್ದಾರೆ. ಈ ಸಂಕಲನದ ಕವಿತೆಗಳ ಕುರಿತು ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ’ನೀಲಿ ಕಣ್ಣುಗಳ ಹುಡುಗಿ ಜಬೀನ್ ಬರೆದ ಕವಿತೆಗಳನ್ನು ಓದುತ್ತಿದ್ದರೆ ದುಃಖಗೊಂಡ ಪಕ್ಕದ ಮನೆಯ ಹುಡುಗಿಯೊಬ್ಬಳ ಹೃದಯದೊಳಕ್ಕೆ ಇಣುಕಿದಂತಾಗುತ್ತದೆ. ಯಾರನ್ನೋ ಕಳೆದುಕೊಂಡು, ಯಾರಿಗೂ ಹೇಳಿಕೊಳ್ಳಲಾಗದಂತದ ಯಾತನೆಯನ್ನು ಅನುಭವಿಸುತ್ತಿರುವ ಹುಡುಗಿಯೊಂದಿಗೆ ನಾವಷ್ಟೇ ಮಾತಾಡಿದಂತಾಗುತ್ತದೆ. ಆಕೆಯ ಕವಿತಾ ಸಂಪುಟ 'ಆಕು ರಾಲು ಕಾಲಂ’ನ ಭಾವಾನುವಾದವನ್ನು ನನ್ನ ಪ್ರೀತಿಯ ಹುಡುಗ ಚಿದಾನಂದ ಸಾಲಿ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಾಹಿತಿ ಶಾಂತರಸ ಅವರು ’ಎಲೆಯುದುರೂ ಕಾಲ' ಓದಿದೆ, ಮತ್ತೆ ಮತ್ತೆ ಓದಿದೆ. ತುಂಬ ಖುಷಿಪಟ್ಟೆ, ಸಮರ್ಥ ಅನುವಾದ, ಅನುವಾದ ಎಂಬುದನ್ನು ತೆಗೆದರೆ ಅದು ನಿಮ್ಮದೇ ಕಾವ್ಯ ಅನ್ನಿಸದಿರದು; ಅಷ್ಟು ಸೊಗಸಾಗಿದೆ ಅನುವಾದೆ. ಕನ್ನಡಕ್ಕೆ ಒಂದು ಹೊಸ ಕಾವ್ಯ ಕೊಟ್ಟಿರಿ. ನಮ್ಮಲ್ಲಿ ಇನ್ನೂ ಇಂಥ ಸಂವೇದನೆ ಬರಬೇಕು’ ಎಂದು ಶ್ಲಾಘಿಸಿದ್ದಾರೆ.

ಯುವಕವಿ ಡಾ. ಆನಂದ ಋಗ್ವೇದಿ ಅವರು ’ಅನುವಾದದಲ್ಲಿ ಸಾಲಿ, ಕನ್ನಡದ ನುಡಿಗಟ್ಟು, ಮಟ್ಟುಗಳಲ್ಲಿ ಕವಿತೆಗಳನ್ನಷ್ಟೇ ಅಲ್ಲದೆ, ಅವುಗಳ ತೆಲುಗುತನವನ್ನೂ ಮುಕ್ಕಾಗದ ರೀತಿಯಲ್ಲಿ ತಂದಿರಿಸಿದ್ದಾನೆ. ಹಾಗಾಗಿ ಈ ಸಂಕಲನದ ಮೊದಲ ಓದು ಸರಾಗವಾದ, ಆಪ್ತವಾದ, ಹೃದಯಸ್ಪರ್ಶಿಯಾದ ಅನುಭವ ನೀಡುತ್ತದೆ, ಸ್ತ್ರೀತನದ ಗಟ್ಟಿದನಿಯ ಈ ಕವಿತೆಗಳನ್ನು ಪುರುಷನೊಬ್ಬ ಅನುವಾದ ಮಾಡುವಾಗ ಈ ಸ್ತ್ರೀತನ ಮುಕ್ಕಾಗದೆ ಉಳಿದ ಸೂಕ್ಷ್ಮತೆ ಇದೆಯಲ್ಲ, ಅದು ಅನುವಾದದ ಸಾರ್ಥಕತೆ’ ಎಂಬ ಮಾತುಗಳು ಅನುವಾದದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books