ಇಂದ್ರಸಭಾ

Author : ಚಿದಾನಂದ ಸಾಲಿ

Pages 51

₹ 50.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560133
Phone: 157 - 23183311, 23183312

Synopsys

ಉರ್ದು ಕವಿ ಸಯ್ಯದ್ ಆಗಾ ಹಸನ್ ಅಮಾನತ್ ಲಖನವಿ ರಚಿಸಿರುವ ಈ ನಾಟಕ ಆಧುನಿಕ ಉರ್ದು ಸಾಹಿತ್ಯದ ವಿಶಿಷ್ಟ ಕೃತಿ. ’ಇಂದ್ರಸಭಾ’ ಪ್ರೇಮಕ್ಕಾಗಿ ಹಂಬಲಿಸುವ, ಚಡಪಡಿಸುವ, ದುರಂತ ತಂದುಕೊಳ್ಳುವ, ಸುಖಕ್ಕಾಗಿ ಹಂಬಲಿಸುವ ಬಗ್ಗೆ ಮನಸ್ಥಿತಿಗಳನ್ನು ಬಣ್ಣಿಸುತ್ತದೆ. ಋತು ಚಕ್ರಗಳ ಚಲನೆಗೂ ಮನುಷ್ಯನ ಬದುಕಿಗೂ ಇರುವ ಸಂಕೀರ್ಣ ಸಂಬಂಧಗಳನ್ನೂ ಶೋಧಿಸುವ ಈ ನಾಟಕ ಭಾರತೀಯ ಉರ್ದು ಸಾಹಿತ್ಯದ ಮೊದಲ ಮಹತ್ವದ ನಾಟಕವೆಂದೇ ಪ್ರಖ್ಯಾತವಾಗಿದೆ.  ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಈ ನಾಟಕವವನ್ನು ಕನ್ನಡ ನಾಟಕಕಾರರು, ಅನುವಾದಕರು, ರಂಗಕರ್ಮಿಗಳು, ಮೂಲ ಭಾಷೆಗಳ ಪರಿಣತರ ಮೂಲಕ ಕನ್ನಡ ಅನುವಾದ ಕಾರ್ಯದಲ್ಲಿ ಹೊರತರಲಾಯಿತು. ಈ ನಾಟಕವನ್ನುಕನ್ನಡೀಕರಿಸಿದ ಬೋಡೆ ರಿಯಾಜ್ ಅಹಮದ್, ಚಿದಾನಂದ ಸಾಲಿ, ವಿಕ್ರಮ ವಿಸಾಜಿಯವರ ಕೆಲಸ ಪುಸ್ತಕ ರೂಪವನ್ನು ಪಡೆದು ಕನ್ನಡ ನಾಟಕ ಪರಂಪರೆಯನ್ನು ಹೆಚ್ಚಿಸಿದೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books