ಪದ್ಯ ಪರದೇಶ

Author : ಚಿದಾನಂದ ಸಾಲಿ

Pages 92

₹ 80.00




Year of Publication: 2019
Published by: ಋತು ಪ್ರಕಾಶನ
Address: ​​​​​​​ಋತು ಪ್ರಕಾಶನ, ರಾಯಚೂರು
Phone: 9845471861

Synopsys

ಚಿದಾನಂದ ಸಾಲಿ ಅವರ  ಅನುವಾದಿತ ಕವಿತೆಗಳ ಗುಚ್ಛ ಈ ಪುಸ್ತಕ. ಇಲ್ಲಿರುವ  ಎಲ್ಲಾ ಕವನಗಳು ಬೇರೆ ಬೇರೆ ಪ್ರಾಂತೀಯ ಭಾಷೆಗಳ ಕಾವ್ಯದ ಶೈಲಿ ಮತ್ತು ದಿಕ್ಕುಗಳ ಸ್ಕೂಲ ಪರಿಚಯದ ಬೆಳಕಿನಲ್ಲಿ ಕನ್ನಡದ ಮಿತಿ ಮತ್ತು ಮಹತ್ವಗಳನ್ನು ಸ್ಪಷ್ಟವಾಗಿ ಕಾಣಿಸಲು ಪ್ರಯತ್ನಿಸಲಾಗಿದೆ. ಹೊರಗಿನದು ಒಳಗಿನದು ಎಂಬ ಭೇದವಿಲ್ಲದೆ ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಎದುರುಗೊಳ್ಳುವ ಅಂಶಗಳು ಇಲ್ಲಿವೆ. ಭಾರತದ ಬೇರೆ ಬೇರೆ ಭಾಗದ ಹದಿನಾರು ಕವಿಗಳು, ನಾಲ್ವರು ಕವಯತ್ರಿಯರು ಸೇರಿ ಒಟ್ಟು ಇಪ್ಪತ್ತು ಕಾವ್ಯವ್ಯಕ್ತಿತ್ವಗಳ ಒಂದು ವಿಶಿಷ್ಟ ಕಾವ್ಯಕೂಟ ಇಲ್ಲಿದೆ. 

 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books